ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿ ಆ.27ರಂದು ನಡೆದಿದ್ದ ಶೂಟೌಟ್‌ಗೆ ಬಳಸಿದ್ದ ಗನ್ ಮೇಲೆ “Kill Donald Trump” “Nuke India” ಎಂದು ಬರೆದಿರುವುದು ಕಂಡುಬಂದಿದೆ.
ಶೂಟರ್‌ನ್ನು ರಾಬಿನ್ ವೆಸ್ಟ್‌ಮನ್ (23) ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ.
ರೈಫಲ್, ಶಾಟ್‌ಗನ್ ಮತ್ತು ಪಿಸ್ತೂಲ್ ಬಳಸಿ ಗುಂಡಿನ ದಾಳಿ ನಡೆಸಿದ್ದು, ಈ ಬಂದೂಕುಗಳ ಮೇಲೆ “Kill Donald Trump” “Nuke India” ಎಂದು ಬರೆದಿರುವುದು ಪತ್ತೆಯಾಗಿದೆ. ಈ ಕುರಿತು ರಾಬಿನ್ ಡಬ್ಲ್ಯೂ ಎಂಬ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಆದರೆ ಸದ್ಯ ವಿಡಿಯೋಗಳನ್ನು ತೆಗೆದುಹಾಕಲಾಗಿದೆ.
10 ನಿಮಿಷಗಳ ವಿಡಿಯೋದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಲೋಡ್ ಮಾಡಲಾಗಿದ್ದ ಗನ್‌ಗಳನ್ನು ತೋರಿಸಲಾಗಿತ್ತು. Kill Donald Trump”, “Kill Trump Now”, “Israel must fall”, “Burn Israel” ಎಂದು ಗನ್ ಮೇಲೆ ಬರೆಯಲಾಗಿತ್ತು. ಇನ್ನೊಂದು ಬಂದೂಕಿನ ಮೇಲೆ “ನ್ಯೂಕ್ ಇಂಡಿಯಾ” ಎಂದು ಬರೆದಿರುವುದು ಕಂಡುಬಂದಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ವೆಸ್ಟ್ಮನ್ ಕಾನೂನುಬದ್ಧವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದು, ಆಕೆ ಯಾವುದೇ ಅಪರಾಧದ ಹಿನ್ನೆಲೆಯನ್ನು ಹೊಂದಿಲ್ಲ ಮತ್ತು ಏಕಾಂಗಿಯಾಗಿ ಇದೆಲ್ಲವನ್ನು ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.
ಬುಧವಾರ (ಆ.27) ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿ ಅನನ್ಸಿಯೇಷನ್ ಕ್ಯಾಥೋಲಿಕ್ ಶಾಲೆಯ ಚರ್ಚ್ ಮೇಲೆ ಗುಂಡಿನ ದಾಳಿ ನಡೆಸಿದ್ದಳು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಸ್ವಲ್ಪ ಸಮಯದ ನಂತರ ಆಕೆ ಪಾರ್ಕಿಂಗ್‌ವೊಂದರಲ್ಲಿ ಸ್ವಯಂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾಳೆ.