ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿಯ ಒಂದು ತಿಂಗಳ ನಂತರ ನ್ಯೂ ಸೌತ್ ವೇಲ್ಸ್‌ನಲ್ಲಿ ನಡೆದ ಈ ಶೂಟೌಟ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದೂಕುಧಾರಿ ಮೊದಲು ತನ್ನ ಮಾಜಿ ಗೆಳತಿ ಮತ್ತು ಎನ್‌ಎಸ್‍ಡಬ್ಲ್ಯು ಸೆಂಟ್ರಲ್ ವೆಸ್ಟ್ ಪ್ರದೇಶದ ಲೇಕ್ ಕಾರ್ಗೆಲ್ಲಿಗೊದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದು, . ನಂತರ ಪಟ್ಟಣದಲ್ಲಿ ತನಗೆ ಪರಿಚಿತರಾಗಿರುವ ಇತರ ಇಬ್ಬರ ಮೇಲೆ ಹಾರಿಸಿದ್ದಾನೆ. .ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಮೃತಪಟ್ಟಿದ್ದಾರೆ.
ಸಿಡ್ನಿ ನಗರದಿಂದ ಸುಮಾರು 600 ಕಿಲೋಮೀಟರ್ ಪಶ್ಚಿಮದಲ್ಲಿರುವ ನ್ಯೂ ಸೌತ್ ವೇಲ್ಸ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಸ್ಥಳಕ್ಕೆ ತುರ್ತು ಸೇವಾ ಸಿಬ್ಬಂದಿ ಧಾವಿಸಿದ್ದಾರೆ.
ಸಾರ್ವಜನಿಕರಿಗೆ ಆ ಪ್ರದೇಶವನ್ನು ದೂರವಿರಲು ಪೊಲೀಸರು ಮನವಿ ಮಾಡಿದ್ದು, ಸ್ಥಳೀಯ ನಿವಾಸಿಗಳು ಮನೆಯೊಳಗೇ ಉಳಿಯುವಂತೆ ಸೂಚಿಸಿದ್ದಾರೆ. ಶಂಕಿತ ಬಂದೂಕುಧಾರಿ ಪಟ್ಟಣದಲ್ಲಿ ಅಡಗಿಕೊಂಡಿದ್ದಾನೆ ಮತ್ತು ಅವನ ಬಳಿ ಆಯುಧವಿದೆ ಎಂದು ಹೇಳಲಾಗಿದೆ. ಆತನ ಸೆರೆಗೆ ಪೊಲೀಸರು ಭಾರಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಯಹೂದಿಗಳ ಹನುಕ್ಕಾ ಹಬ್ಬವನ್ನು ಆಚರಿಸುವ ಕಾರ್ಯಕ್ರಮವೊಂದರಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿ 15 ಜನರನ್ನು ಹತ್ಯೆ ಮಾಡಿದ ಒಂದು ತಿಂಗಳ ನಂತರ ಈ ಗುಂಡಿನ ದಾಳಿ ನಡೆದಿದೆ.


