ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೊಂದು ಕಾಲ ಇತ್ತು, ಅರ್ಧ ಗಂಟೆಗೆ ಮಕ್ಕಳು ಹೋಮ್ ವರ್ಕ್‌ಗಳನ್ನೆಲ್ಲಾ ಮುಗಿಸಿ ಅಂಗಳಕ್ಕೆ ಬಂದು ಆಟ ಆಡ್ತಿದ್ರು. ಆದರೆ ಈಗ ಯಾವ ಹೋಮ್ ವರ್ಕ್ ಎಷ್ಟು ಪೇಜ್ ಇದೆ ಎಂದು ಹುಡುಕೋದ್ರಲ್ಲೇ ಅರ್ಧ ಗಂಟೆ ಕಳೆದುಹೋಗುತ್ತದೆ. ಇಲ್ಲೊಬ್ಬ ತಂದೆ ಈಗಿನ ಎಜುಕೇಷನ್ ಸಿಸ್ಟಮ್‌ನ್ನೇ ದೂಷಿಸಿದ್ದಾರೆ. ಎಂಟರಿಂದ ಒಂಬತ್ತು ಗಂಟೆ ನಿದ್ದೆ ಮಾಡಬೇಕಾದ ಮಕ್ಕಳು ಅರ್ಧರಾತ್ರಿವರೆಗೂ ಹೋಮ್ ವರ್ಕ್, ಪ್ರಾಜೆಕ್ಟ್ ವರ್ಕ್ ಮಾಡಿಕೊಂಡು ಕೂರಬೇಕಾ ಎಂದು ಗರಂ ಆಗಿದ್ದಾರೆ.
ಪುಣೆ ವ್ಯಕ್ತಿ ಹಾಗೂ ಔರಮ್ ಕ್ಯಾಪಿಟಲ್‌ನ ಸಹ-ಸ್ಥಾಪಕರಾದ ಹೂಡಿಕೆದಾರ ನಿತೀನ್ ಎಸ್ ಧರ್ಮಾವತ್ ತಮ್ಮ ಎಕ್ಸ್ ಖಾತೆಯಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಶಾಲೆಗಳು ನಿಷ್ಪ್ರಯೋಜಕವಾಗಿವೆ. ಈಗ ಮಧ್ಯರಾತ್ರಿ 12 ಗಂಟೆ. 8ನೇ ತರಗತಿಯ ಮಗು ಮನೆಕೆಲಸ ಮುಗಿಸಿದ ನಂತರವೂ ಅರ್ಥವಿಲ್ಲದ ಪ್ರಾಜೆಕ್ಟ್ ಮಾಡುತ್ತಿದ್ದಾನೆ. ಅದನ್ನು ಮಾಡದಿದ್ದರೆ ಅವನಿಗೆ ನೆಚ್ಚಿನ ದೈಹಿಕ ಶಿಕ್ಷಣ ಅವಧಿಯಲ್ಲಿ ಭಾಗವಹಿಸಲು ಅವಕಾಶ ಸಿಗುವುದಿಲ್ಲ ಎಂಬ ಭಯ ಅವನೊಳಗಿದೆ. ಪ್ರತಿದಿನ ಅವನು ರಾತ್ರಿ 12 ರಿಂದ 12.30 ರವರೆಗೆ ಎಚ್ಚರವಾಗಿರುತ್ತಾನೆ. ಪೋಷಕರಾಗಿ, ಈ ಕೊಳೆತ ಶಿಕ್ಷಣ ವ್ಯವಸ್ಥೆಯ ಎದುರು ನಾನು ಸಂಪೂರ್ಣ ಅಸಹಾಯಕನಾಗಿದ್ದೇನೆ. ನಾನು ಏನೇ ವಿರೋಧಿಸಿದರೂ ಈಗ ನನ್ನ ಮಗುವಿನ ಪರವಾಗಿ ಎದುರಿಸಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
Viral | ನಿದ್ದೆ ಮಾಡಬೇಕಾದ ಮಕ್ಕಳು ರಾತ್ರಿಯಿಡೀ ಪ್ರಾಜೆಕ್ಟ್ ವರ್ಕ್ ಮಾಡ್ಕೊಂಡು ಕೂರ್ಬೇಕಾ?
