ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಧ್ಯಾಯ ಮುಗಿದಿದೆ ಎಂಬರ್ಥದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಇರಾನ್ನ ಪ್ರಬಲ ನಾಯಕರ ಸಾಲು ಸಾಲು ಪತನದ ಬಗ್ಗೆ ನೇರವಾಗಿಯೇ ಮಾತನಾಡಿದ್ದಾರೆ.
ಅಲಿ ಖಮೇನಿ ಅವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, “ಆ ಹುಚ್ಚನನ್ನು ನಾವು ತಡೆಯಬೇಕಿತ್ತು, ಈಗ ಆ ಸರ್ವೋಚ್ಚ ನಾಯಕ ನಮ್ಮೊಂದಿಗಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
“ಹಳೆಯ ನಾಯಕರು ಹೋದ ಮೇಲೆ ಹೊಸಬರನ್ನು ನೇಮಿಸಿದ್ದರು. ಅವರನ್ನೂ ನಾವು ಮಟ್ಟಹಾಕಿದ ಮೇಲೆ ಈಗ ಇರಾನ್ನಲ್ಲಿ ನಾಯಕತ್ವವೇ ಇಲ್ಲದಂತಾಗಿದೆ” ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ.
ಒಂದು ವೇಳೆ ನಾವು ಬಿ-2 ಬಾಂಬರ್ಗಳ ಮೂಲಕ ಅವರ ಪರಮಾಣು ಸ್ಥಾವರಗಳನ್ನು ಪುಡಿ ಮಾಡದಿದ್ದರೆ, ಅವರು ಖಂಡಿತವಾಗಿಯೂ ಅಣ್ವಸ್ತ್ರ ಬಳಸಿ ಅನಾಹುತ ಮಾಡುತ್ತಿದ್ದರು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಸೋತು ಸುಣ್ಣವಾಗಿರುವ ಇರಾನ್ ಈಗ ಅಮೆರಿಕದ ಮುಂದೆ ಒಪ್ಪಂದಕ್ಕಾಗಿ ಅಂಗಲಾಚುತ್ತಿದೆ. ಆದರೆ, ಸಮಯ ಮೀರಿ ಹೋಗಿದೆ ಎಂದು ಟ್ರಂಪ್ ಗುಡುಗಿದ್ದಾರೆ.



