Friday, January 2, 2026

VIRAL | ಇಂಥದ್ದೆಲ್ಲ ಮಕ್ಕಳಿಗೆ ಕೊಡಬೇಕಾ? ಜಾಮ್‌ ಬಾಟಲಿಯಲ್ಲಿ ರಾಶಿ ಬಿಳಿ ಹುಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೇಕರಿಯಿಂದ, ಅಂಗಡಿಯಿಂದ ರೆಡಿಮೇಡ್‌ ಜಾಮ್‌ ತಂದು ಮಕ್ಕಳಿಗೆ ಕೊಡ್ತೀರಾ? ಈ ಸುದ್ದಿ ಮಿಸ್‌ ಮಾಡದೇ ಓದಿ..
ಗ್ರಾಹಕರೊಬ್ಬರು ಬೇಕರಿಯೊಂದರಲ್ಲಿ ಖರೀದಿಸಿದ್ದ ಫ್ರೂಟ್‌ ಜಾಮ್‌ ಬಾಟಲ್‌ನಲ್ಲಿ ಹುಳಗಳು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ನಡೆದಿದೆ.

ನಂದಿ ಗ್ರಾಮದ ಶಾಂತಕುಮಾರ್ ಎಂಬವರು ಗ್ರಾಮದ ಬೇಕರಿಯೊಂದರಲ್ಲಿ ಬಾಟಲಿ ಜಾಮ್‌ ಖರೀದಿಸಿದ್ದಾರೆ. ಮನೆಗೆ ಹೋಗಿ ಜಾಮ್ ಬಾಟಲಿಯ ಮುಚ್ಚಳ ತೆರೆದು ಇನ್ನೇನು ತಿನ್ನೋಕೆ ಮುಂದಾಗಿದ್ದಾರೆ, ಅಷ್ಟರಲ್ಲಿ ಬಾಟಲಿಯೊಳಗೆ ಹುಳುಗಳನ್ನು ಕಂಡು ಹೌಹಾರಿದ್ದಾರೆ. 

ಬಾಟಲಿಯ ಮೇಲೆ ಜಾಮ್‌ ತಯಾರಿಸಿದ ದಿನಾಂಕ ಸೆಪ್ಟೆಂಬರ್ 2025 ಹಾಗೂ ಅವಧಿ ಮೀರುವ ದಿನಾಂಕ ಅಕ್ಟೋಬರ್ 2026 ಎಂದು ನಮೂದಿಸಲಾಗಿದೆ. ಜಾಮ್ ತಯಾರಾಗಿ ನಾಲ್ಕು ತಿಂಗಳಾಗಿದೆ. ಆದರೆ ಈಗಾಗಲೇ ಜಾಮ್ ನಲ್ಲಿ ಹುಳ ಬಂದಿದೆ. ಇದನ್ನ ಕಂಡ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ. ಬೇಕರಿಯವರು ನಮ್ಮ ತಪ್ಪಿಲ್ಲ ಎಂದು ನುಣುಚಿಕೊಂಡಿದ್ದಾರೆ. ಸದ್ಯ ಪೋಷಕರು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

error: Content is protected !!