April 9, 2026
Thursday, April 9, 2026
spot_img

8 ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್, ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರ ಕೊಡಲೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವಿಫಲರಾದ ಎಂಟು ಐಎಎಸ್‌ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಸಿಎಸ್‌ ಶಾಲಿನಿ ರಜನೀಶ್‌ ಕ್ರಮ ಕೈಗೊಂಡಿದ್ದು, ಸೂಕ್ತ ಉತ್ತರ ನೀಡದ ಹಿನ್ನೆಲೆ ಶೋಕಾಸ್‌ ಜಾರಿ ಮಾಡಲಾಗಿದೆ.

ಸದನದಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗದ ಕಾರಣ ಸರ್ಕಾರಕ್ಕೆ ತೀವ್ರ ಮುಜುಗರ ಆಗಿತ್ತು. ಸ್ಪೀಕರ್‌ ಯು.ಟಿ ಖಾದರ್‌ ಕೂಡ ಅಸಮಾಧಾನದಿಂದ ಸಭಾತ್ಯಾಗ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಅಧಿಕಾರಿಗಳಿಗೆ ಶೋಕಾಸ್‌ ಜಾರಿ ಮಾಡಲಾಗಿದೆ.

ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ- ಆರ್.ವಿನೋತ್ ಪ್ರಿಯಾ, ವಸತಿ ಇಲಾಖೆ ಕಾರ್ಯದರ್ಶಿ- ಮೋಹನ್ ರಾಜ್ ಕೆ.ಪಿ, ಸಾರಿಗೆ ಇಲಾಖೆ ಕಾರ್ಯದರ್ಶಿ- ಎನ್.ವಿ ಪ್ರಸಾದ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ – ಆರ್.ಗೀರಿಶ್, ಲೋಕಪಯೋಗಿ ಇಲಾಖೆ ಕಾರ್ಯದರ್ಶಿ- ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಕಂದಾಯ ಇಲಾಖೆ- ರಾಜೇಂದರ್ ಕುಮಾರ್ ಕಟಾರಿಯಾಗೆ ಶೋಕಾಸ್‌ ನೀಡಲಾಗಿದೆ.

ಕೂಡಲೇ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಜೆಟ್ ಅಧಿವೇಶನದಲ್ಲಿ 230 ಪ್ರಶ್ನೆಗಳಿಗೆ ಕೇವಲ 84 ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !