Monday, November 24, 2025

2028ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರ್ತಾರೆ: ಖರ್ಗೆ ನಿವಾಸಕ್ಕೆ ಸಚಿವರ ಪರೇಡ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ರಾಜ್ಯ ರಾಜಕಾರಣ ದಲ್ಲಿ ಕುರ್ಚಿ ಗುದ್ದಾಟ ಜೋರಾಗಿದ್ದು,ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಚಿವರು ಪರೇಡ್ ನಡೆಸಿದ್ದಾರೆ.

ಶನಿವಾರ (ನ.22) ಸಿಎಂ ಸಿದ್ದರಾಮಯ್ಯ ಖರ್ಗೆಯವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಇಂದು (ನ.23) ಖರ್ಗೆ ನಿವಾಸಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವ ಕೆ.ವೆಂಕಟೇಶ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾಗಿ, ಚರ್ಚೆ ನಡೆಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಈಗ ಸಿಎಂ ಕುರ್ಚಿ ಖಾಲಿ ಇಲ್ಲಾ. 2028ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಇರ್ತಾರೆ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ರೇಸ್ ಶುರುವಾದಾಗ ಪ್ಲೇಯರ್ ಆಯ್ಕೆ ಮಾಡ್ತಾರೆ. ಆ ರೀತಿಯ ಸನ್ನಿವೇಶ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅಧ್ಯಕ್ಷರು ನೀವೆಲ್ಲಾ ಆಕ್ಟೀವ್ ಆಗಿ, ಪಕ್ಷ ಕಟ್ಟಿ ಎಂದಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಕಾಂಗ್ರೆಸ್‌ನಲ್ಲೇ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಬಿಜೆಪಿ ಆರೋಪವಾಗಿ ವಿಚಾರವಾಗಿ ಮಾತನಾಡಿ, ಅವರು ವಿರೋಧ ಪಕ್ಷದವರಾದ ಕಾರಣ ಆ ರೀತಿ ಮಾತಾಡ್ತಾರೆ. ನಾವು ಕ್ಯಾಬಿನೆಟ್ ರಿಶಫಲ್ ಬಗ್ಗೆಯೂ ಚರ್ಚೆ ಮಾಡಿಲ್ಲ. ಶಾಸಕರ ಸಹಿ ಸಂಗ್ರಹದ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಹಿ ಹಾಕಲು ಯಾರು ಕರೆದಿಲ್ಲ ಎಂದು ತಿಳಿಸಿದ್ದಾರೆ.

error: Content is protected !!