ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಏಪ್ರಿಲ್ 13 ರಿಂದ 17 ರವರೆಗೆ ನಿಗದಿಯಾಗಿದ್ದ ಸಂಚಾರ ನಿಷೇಧವನ್ನು NHAI ಸದ್ಯಕ್ಕೆ ಮುಂದೂಡಿದೆ.
ಫ್ಲೈಓವರ್‌ನ ಬಲವರ್ಧನೆಗಾಗಿ ಹೊಸದಾಗಿ 1,422 ಕೇಬಲ್‌ಗಳನ್ನು ಅಳವಡಿಸಲಾಗಿದ್ದು, ಅವುಗಳ ಸಾಮರ್ಥ್ಯ ಅಳೆಯಲು ‘ಅಂತಿಮ ಲೋಡ್ ಪರೀಕ್ಷೆ’ ನಡೆಸಲು ಪ್ರಾಧಿಕಾರ ಸಜ್ಜಾಗಿತ್ತು. ಆದರೆ, ಬೆಂಗಳೂರು ಸಂಚಾರ ಪೊಲೀಸರ ಮನವಿಯ ಮೇರೆಗೆ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದರಿಂದಾಗಿ ಮುಂದಿನ ಐದು ದಿನಗಳ ಕಾಲ ವಾಹನ ಸಂಚಾರ ಎಂದಿನಂತೆ ಇರಲಿದ್ದು, ಸವಾರರು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಬಹುದಾಗಿದೆ.
ಪರಿಷ್ಕೃತ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.



