ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟಿನಿಂದಾಗಿ LPG ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಒಂದು ಸಿಲಿಂಡರ್ ಪಡೆದ ನಂತರ ಮುಂದಿನ ಬುಕ್ಕಿಂಗ್‌ಗೆ ಕನಿಷ್ಠ 21 ರಿಂದ 25 ದಿನಗಳ ಕಡ್ಡಾಯ ಅವಧಿಯನ್ನು ವಿಧಿಸಲಾಗಿದೆ.
ಈ ಹಿಂದೆ 55 ದಿನಗಳಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ಜನರು ಈಗ ಯುದ್ಧ ನೆಪದಿಂದ, ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಕೆಲವೊಂದು ಪೋಸ್ಟ್ಗಳ ಕಾರಣದಿಂದ ಹಲವಾರು ಜನರು 15 ದಿನಗಳಿಗೇನೆ ಸಿಲಿಂಡರ್‌ಗಳನ್ನು ಬುಕ್ ಮಾಡಲು ಪ್ರಾರಂಭಿಸಿದ ನಿದರ್ಶನಗಳು ಕಂಡುಬರುತ್ತಿದೆ . ಇದನ್ನು ನಿಯಂತ್ರಿಸಲು ಹೊಸ ನಿಯಮ ಜಾರಿಗೆ ತರಲಾಗಿದೆ. ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗಿಂತ ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.
ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ, ನಾರ್ವೆಯಂತಹ ದೇಶಗಳು ಭಾರತಕ್ಕೆ ಎಲ್‌ಪಿಜಿ ಮಾರಾಟ ಮಾಡಲು ಮುಂದಾಗಿವೆ. ಗ್ಯಾಸ್ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ದೇಶಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ.



