February 21, 2026
Saturday, February 21, 2026
spot_img

ಕೇರಳದಲ್ಲಿ SIR: 9 ಲಕ್ಷ ಮತದಾರರ ಹೆಸರಿಗೆ ಗೇಟ್ ಪಾಸ್ ನೀಡಿದ ಚುನಾವಣಾ ಆಯೋಗ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚುನಾವಣಾ ಆಯೋಗವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ ಕೇರಳದಲ್ಲಿ ಶನಿವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಸುಮಾರು ಒಂಬತ್ತು ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ.

ಪತ್ರಿಕಾಗೋಷ್ಠಿಯಲ್ಲಿ ಇಸಿಐ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 2,69,53,644 ಮತದಾರರಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಾರಂಭವಾಗುವ ಮೊದಲು 2,78,50,855 ಮತದಾರರಿದ್ದರು ಎಂದು ತಿಳಿಸಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ 8,97,211 ಮತದಾರರನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

ಪುರುಷ ಮತದಾರರ ಸಂಖ್ಯೆ 1,31,26,048, ಮಹಿಳಾ ಮತದಾರರ ಸಂಖ್ಯೆ 1,38,27,319 ಮತ್ತು ಟ್ರಾನ್ಸ್‌ಜೆಂಡರ್ ಮತದಾರರ ಸಂಖ್ಯೆ 277 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ 36.88 ಲಕ್ಷ ಮತದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ ಎಂದು ಇಸಿಐ ಅಧಿಕಾರಿಗಳು ತಿಳಿಸಿದ್ದಾರೆ, 53,229 ಜನರನ್ನು ಅಂತಿಮ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಿದೆ. .

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !