March 22, 2026
Sunday, March 22, 2026
spot_img

ಸೀತಾ ಈಗ ಸ್ಟಾರ್ ನಟರ ಲಕ್ಕಿ ಚಾರ್ಮ್: ಅಲ್ಲು ಅರ್ಜುನ್-ಅಟ್ಲಿ ಸಿನಿಮಾಗೆ ಮೃಣಾಲ್ ಠಾಕೂರ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗದಲ್ಲಿ ಕಾಲಬದಲಾದಂತೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಸದ್ಯ ನಟಿ ಮೃಣಾಲ್ ಠಾಕೂರ್ ಅಂತಹದ್ದೇ ಒಂದು ಸುವರ್ಣ ಘಟ್ಟದಲ್ಲಿದ್ದಾರೆ. ಇದುವರೆಗೆ ಮಧ್ಯಮ ಬಜೆಟ್ ಚಿತ್ರಗಳಲ್ಲಿ ಮಿಂಚಿದ್ದ ಈ ಬೆಡಗಿ, ಈಗ ಟಾಲಿವುಡ್‌ನ ಅತಿ ದೊಡ್ಡ ಸ್ಟಾರ್‌ಗಳ ಮೊದಲ ಆಯ್ಕೆಯಾಗುತ್ತಿದ್ದಾರೆ.

‘ಪುಷ್ಪ 2’ ಯಶಸ್ಸಿನ ಅಲೆಯಲ್ಲಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸ್ಟಾರ್ ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಸಿನಿಮಾಗೆ ಮೃಣಾಲ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ, ಮೃಣಾಲ್ ಈಗಾಗಲೇ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ಇದೊಂದು ಅವರ ಕೆರಿಯರ್‌ನ ಅತಿದೊಡ್ಡ ಮೈಲಿಗಲ್ಲಾಗಲಿದೆ.

ಇಷ್ಟೇ ಅಲ್ಲದೇ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನ ‘ಪೆದ್ದಿ’ ಚಿತ್ರದಲ್ಲೂ ಮೃಣಾಲ್ ಮಿಂಚಲಿದ್ದಾರೆ. ಗ್ರಾಮೀಣ ಕ್ರೀಡೆ ಮತ್ತು ರಾಜಕೀಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದು, ಮೃಣಾಲ್ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಸಮಂತಾ ಮತ್ತು ಪೂಜಾ ಹೆಗ್ಡೆ ಅವರಂತೆ ಮೃಣಾಲ್ ಕೂಡ ಈಗ ‘ಸ್ಪೆಷಲ್ ಸಾಂಗ್’ ಟ್ರೆಂಡ್ ಸೆಟ್ ಮಾಡಲು ಸಜ್ಜಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !