March 27, 2026
Friday, March 27, 2026
spot_img

SHOCKING | ನರ್ಸ್‌ ನಿರ್ಲಕ್ಷ್ಯದಿಂದ ಆರು ತಿಂಗಳ ಮಗುವಿನ ಬೆರಳೇ ಹೋಯ್ತು, ಆಸ್ಪತ್ರೆ ವಿರುದ್ಧ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಆರು ತಿಂಗಳ ಮಗುವಿನ ಬೆರಳನ್ನೇ ಕತ್ತರಿಸಲಾಗಿದೆ.

ಇಂದಿರಾ ನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಮಗು ಅನಾರೋಗ್ಯದ ಕಾರಣ ಅಡ್ಮಿಟ್‌ ಆಗಿತ್ತು. ಇನ್ನೇನು ಡಿಸ್ಚಾರ್ಜ್‌ ಮಾಡುವಾಗ ಡ್ರಿಪ್ಸ್‌ಗೆ ಹಾಕಿದ್ದ ಡ್ರೆಸ್ಸಿಂಗ್‌ ತೆಗೆಯುವಾಗ ಅಜಾಗರೂಕತೆಯಿಂದ ನರ್ಸ್‌ ಮಗುವಿನ ಕಿರುಬೆರಳಿನ ಅರ್ಧಭಾಗವನ್ನೇ ಕತ್ತರಿಸಿದ್ದಾರೆ.

ಗಂಭೀರ ಗಾಯದಿಂದಾಗಿ ಮಗು ಕೈಯಿಂದ ರಕ್ತ ಸೋರಿ ನರಳಾಡಿದೆ. ಪೋಷಕರು ಈ ಬಗ್ಗೆ ದೂರು ದಾಖಲಿಸಿದ್ದಾರೆ.6 ತಿಂಗಳ ತಮ್ಮ ಗಂಡು ಮಗು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಹಿನ್ನೆಲೆ ಇಂದಿರಾನಗರದಲ್ಲಿರುವ ಚಿನ್ಮಯ ಮಿಷನ್ ಆಸ್ಪತ್ರೆಗೆ ಆತನನ್ನು ಕರೆತಂದು ವೈದ್ಯರನ್ನು ಸಂಪರ್ಕಿಸಿದ್ದೆವು.

ಮಗುವಿಗೆ ತೀವ್ರ ಅನಾರೋಗ್ಯದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲು ಅವರು ಸೂಚಿಸಿದ್ದರು. 5-6 ದಿನಗಳ ಚಿಕಿತ್ಸೆ ಬಳಿಕ ಫೆಬ್ರವರಿ 24ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಡಿಸ್ಚಾರ್ಜ್​​ಗೆ ನಿರ್ಧರಿಸಲಾಗಿತ್ತು. ನಾವು ಬಿಲ್ಲಿಂಗ್​​ ಕೌಂಟರ್​​ಗೆ ಹಣ ಪಾವತಿ ಮಾಡಲು ಹೋಗಿದ್ದ ಸಂದರ್ಭ, ನರ್ಸ್​​ ನಿರ್ಲಕ್ಷ್ಯಕ್ಕೆ ಮಗುವಿನ ಎಡಗೈ ಕಿರು ಬೆರಳು ಕಟ್​​ ಆಗಿದೆ. ಹೀಗಾಗಿ ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಂದೆ ವಿಜಯ್​​ ಕುಮಾರ್​​ ಆಗ್ರಹಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಗಾಯಕ್ಕೆ ಡ್ರೆಸ್ಸಿಂಗ್‌ ಮಾಡಿ, ದೊಡ್ಡ ಗಾಯ ಆಗಿಲ್ಲ, ಮಗು ಸಣ್ಣದು ಬೇಗ ಹುಷಾರಾಗುತ್ತದೆ ಎಂದು ಥೆ ಹೇಳಿದ್ದಾರ. ಆದರೆ ಬೆರಳು ಕಟ್‌ ಆಗಿದೆ ಎಂದು ಹೇಳಿಲ್ಲ ಎಂದು ಪೋಷಕರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !