ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ಇಂದು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸನಿಹ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಗುರುತಿಸಲಾದ 9 ನೇ ಮತ್ತು 10ನೇ ಸಂಖ್ಯೆಯ ಜಾಗದಲ್ಲಿ ಶನಿವಾರ ಸಮಾಧಿ ಶೋಧ ಕಾರ್ಯ ಪೂರ್ಣಗೊಂಡಿದೆ.
ಬೆಳಿಗ್ಗೆ 11-45 ರ ಸುಮಾರಿಗೆ 9ನೇ ಸಂಖ್ಯೆಯ ಜಾಗವನ್ನು ಮೊದಲು ಮೂರರಿಂದ ನಾಲ್ಕು ಅಡಿಗಳ ತನಕ ಕಾರ್ಮಿಕರು ನೆಲವನ್ನು ಅಗೆದರೆ ಮತ್ತಿನ ಆಳವನ್ನು ಅಂದರೆ ಸುಮಾರು ಆರೇಳು ಅಡಿಗಳ ತನಕ ಹಿಟಾಚಿ ಅಗೆಯಲಾಯಿತು.
ಬಳಿಕ ಸುಮಾರು ಸಂಜೆ 4.30 ರ ಬಳಿಕ 9 ನೇ ಗುಂಡಿಯಿಂದ ಅನತಿ ದೂರದಲ್ಲಿದ್ದ 10 ನೇ ಪಾಯಿಂಟನ್ನು ಅಗೆಯಲಾಯಿತು.