Monday, November 10, 2025

Skin Care | ಚಳಿ ಶುರುವಾಗ್ತಿದೆ! ಸ್ಕಿನ್‌ ಒಣಗೋ ಮುಂಚೆ ಮಾಯಿಶ್ಚರೈಸ್‌ ಮಾಡೋದು ಹೇಗೆ?

ಚಳಿಗಾಲದಲ್ಲಿ ತ್ವಚೆ ಹೆಚ್ಚು ಒಣಗುತ್ತೆ, ಈ ಸಮಯದಲ್ಲಿ ಸರಿಯಾದ ಮಾಯಿಶ್ಚರೈಸರ್ ಬಳಸಿ, ಮುಖ ಮತ್ತು ಕೈ ಕಾಲುಗಳಲ್ಲಿ ತೇವವನ್ನು ಕಾಪಾಡುವುದು ತುಂಬಾ ಮುಖ್ಯ. ಇಲ್ಲವಾದರೆ ಚರ್ಮದ ತುರಿಕೆ ಡ್ರೈನೆಸ್ ಉತಾಗುತ್ತೆ. ಜೊತೆಗೆ ಕಡಿಮೆ ತಾಪಮಾನ, ಕಡಿಮೆ ತೇವಾಂಶ ಮತ್ತು ಗಾಳಿ ತ್ವಚೆಯನ್ನು ಒಣಗಿಸುತ್ತದೆ ಇದು ಅಲರ್ಜಿ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ ತ್ವಚೆಯನ್ನು ಮಾಯಿಶ್ಚರೈಸ್‌ ಅಗಿಡೋಕೆ ಮಾಯಿಶ್ಚರೈಸರ್‌ ಬಳಸುವುದು ಅತ್ಯಂತ ಮುಖ್ಯ.

  • ತ್ವಚೆಯ ತಯಾರಿ: ಚಳಿಗಾಲದಲ್ಲಿ ತ್ವಚೆ ಒಣಗುತ್ತಿರುವುದರಿಂದ ಮೊದಲು ಮುಖವನ್ನು ಲಘು ಕ್ಲೀನ್ಸರ್‌ ಅಥವಾ ನೀರು ಮತ್ತು ಸೌಮ್ಯ ಸಾಬೂನು ಬಳಸಿಕೊಂಡು ಸ್ವಚ್ಛಗೊಳಿಸಬೇಕು. ರಾಸಾಯನಿಕಯುಕ್ತ ಸಾಬೂನು ಅಥವಾ ಹಾಟ್ ವಾಟರ್ ಬಳಸಬೇಡಿ, ಏಕೆಂದರೆ ಇದು ತ್ವಚೆಯನ್ನು ಇನ್ನಷ್ಟು ಒಣಗಿಸುತ್ತದೆ.
  • ಮಾಯಿಶ್ಚರೈಸರ್ ಆಯ್ಕೆ: ಚಳಿಗಾಲದಲ್ಲಿ ತ್ವಚೆಗೆ ಲಘು ಹೈಡ್ರೇಟಿಂಗ್ ಮಾಯಿಶ್ಚರೈಸರ್ ಅನ್ನು ಆಯ್ಕೆ ಮಾಡುವುದು ಉತ್ತಮ. ಹೈಲ್ಯೂರೋನಿಕ್ ಆಮ್ಲ, ಗ್ಲಿಸರಿನ್, ಶಿಯಾ ಬಟರ್, ಕೋಕೊ ಬಟರ್ ಮುಂತಾದ ನೈಸರ್ಗಿಕ ತೇವದಾಯಕ ಅಂಶಗಳಿರುವ ಮಾಯಿಶ್ಚರೈಸರ್ ಹೆಚ್ಚು ಪರಿಣಾಮಕಾರಿಯಾಗಿದೆ.
  • ಮಾಯಿಶ್ಚರೈಸಿಂಗ್ ಕ್ರಮ: ಮಾಯಿಶ್ಚರೈಸರ್ ಅನ್ನು ಮುಖ, ಕೈ, ಕಾಲು ಮತ್ತು ತ್ವಚೆಯ ಎಲ್ಲ ಒಣಗುವ ಭಾಗಗಳಲ್ಲಿ ದಿನಕ್ಕೆ ಕನಿಷ್ಠ ಎರಡು ಬಾರಿ ಹಚ್ಚುವುದು. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಹಚ್ಚಿದರೆ, ತ್ವಚೆ ತೇವದಾಯಕವಾಗಿರುತ್ತದೆ.
  • ಚಳಿಗಾಲದಲ್ಲಿ ತ್ವಚೆಗೆ ನೀರನ್ನು ಸಾಕಷ್ಟು ಸೇವಿಸುವುದು ಸಹ ಮುಖ್ಯ. ಹಾಟ್ ಶವರ್ ಅನ್ನು ಕಡಿಮೆ ಸಮಯಕ್ಕೆ ಮಾತ್ರ ತೆಗೆದುಕೊಳ್ಳಿ ಮತ್ತು ತ್ವಚೆ ಮೇಲೆ ತಕ್ಷಣವೇ ಮಾಯಿಶ್ಚರೈಸರ್ ಹಚ್ಚಿ.
error: Content is protected !!