February 9, 2026
Monday, February 9, 2026
spot_img

Skin Care | ಆಪಲ್ ಸಿಪ್ಪೆ ಬಿಸಾಡ್ಬೇಡಿ: ಇದ್ರಲ್ಲಿದೆ ಸ್ಕಿನ್ ಕೇರ್ ಸೀಕ್ರೆಟ್! ಗೊತ್ತಾ?

ಆಪಲ್ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ನಾವು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ವಾಸ್ತವವಾಗಿ, ಸೇಬಿನ ಸಿಪ್ಪೆಯಲ್ಲೇ ಚರ್ಮದ ಆರೈಕೆಗೆ ಸಹಾಯಕವಾಗುವ ಅನೇಕ ಪೋಷಕಾಂಶಗಳು ಅಡಗಿವೆ.

ಇದರಲ್ಲಿ ವಿಟಮಿನ್‌ A, C, ಆಂಟಿ ಆಕ್ಸಿಡೆಂಟ್ಸ್‌ ಮತ್ತು ಪಾಲಿಫಿನಾಲ್‌ಗಳಿದ್ದು, ಚರ್ಮವನ್ನು ರಕ್ಷಿಸಲು ಮತ್ತು ತಾಜಾತನ ನೀಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಬಳಸಿದರೆ ಮುಖದ ಕಾಂತಿ ಹೆಚ್ಚಿಸಲು ಸಹಕಾರಿ.

ಸೇಬಿನ ಸಿಪ್ಪೆಯಲ್ಲಿ ಇರುವ ನೈಸರ್ಗಿಕ ಆಮ್ಲಗಳು ಮುಖದ ಮೇಲಿನ ಸತ್ತ ಕೋಶಗಳನ್ನು ನಿಧಾನವಾಗಿ ತೆಗೆದುಹಾಕಿ ಚರ್ಮವನ್ನು ಸ್ವಚ್ಛವಾಗಿಡುತ್ತವೆ.

ಇದು ಚರ್ಮದ ರಂಧ್ರಗಳನ್ನು ಕ್ಲೀನ್ ಮಾಡಿ, ಮುಖಕ್ಕೆ ಸಹಜವಾದ ಕಾಂತಿ ನೀಡಲು ಸಹಾಯ ಮಾಡುತ್ತದೆ.

ಆಂಟಿ ಆಕ್ಸಿಡೆಂಟ್ಸ್‌ ಚರ್ಮದ ಮೇಲೆ ಆಗುವ ಹಾನಿಯನ್ನು ತಡೆಯುತ್ತವೆ. ಇದರಿಂದ ಬೇಗನೆ ವಯಸ್ಸಾದಂತೆ ಕಾಣಿಸುವ ಸಮಸ್ಯೆ ಕಡಿಮೆಯಾಗಬಹುದು.

ಸೇಬಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಜೇನುತುಪ್ಪ ಮತ್ತು ರೋಸ್‌ ವಾಟರ್‌ ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಬಹುದು. ಇಲ್ಲವಾದರೆ ಹಸಿ ಸಿಪ್ಪೆಯನ್ನೇ ರುಬ್ಬಿಕೊಂಡು ಬಳಸಬಹುದು.

ಎಣ್ಣೆಯುಕ್ತ, ಒಣ, ಸಾಮಾನ್ಯ ಯಾವ ರೀತಿಯ ಚರ್ಮ ಇದ್ದರೂ ಇದನ್ನು ಬಳಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !