ಚರ್ಮಕ್ಕೆ ಹೊಳಪು, ನಾರ್ಮಲ್ ಟೆಕ್ಸ್ಚರ್ ಮತ್ತು ತಾಜಾತನ ಬೇಕೆಂದರೆ ಕಿತ್ತಳೆ ಸಿಪ್ಪೆ ಅತ್ಯುತ್ತಮ ನೈಸರ್ಗಿಕ ಪರಿಹಾರ. ವಿಟಮಿನ್ C-ಯಿಂದ ತುಂಬಿರುವ ಕಿತ್ತಳೆ ಸಿಪ್ಪೆ ಚರ್ಮದ ಮೇಲೆ ಇರುವ ಮಲಿನತೆ, ಕಲೆ, ಎಣ್ಣೆಯ ಅತಿಯಾದ ಉತ್ಪತ್ತಿಯನ್ನು ಕಡಿಮೆಮಾಡಿ ಚರ್ಮವನ್ನು ಮೃದುವಾಗಿ, ಬೆಳಗುವಂತೆ ಮಾಡುತ್ತದೆ. ಕಾಸ್ಮೆಟಿಕ್ ಉತ್ಪನ್ನಗಳಿಗಿಂತ ಮನೆಯಲ್ಲೇ ತಯಾರಿಸಿದ ಈ ಮಾಸ್ಕ್ ಸುರಕ್ಷಿತ, ಅಲ್ಪ ವೆಚ್ಚ ಮತ್ತು ಪರಿಣಾಮಕಾರಿ ಆಗಿರುವುದು ಇದರ ವಿಶೇಷತೆ.
ಕಿತ್ತಳೆ ಸಿಪ್ಪೆಯ ಮಾಸ್ಕ್ ತಯಾರಿಸುವ ವಿಧಾನ
ಬೇಕಾಗುವ ಪದಾರ್ಥಗಳು:
ಒಣಗಿಸಿದ ಕಿತ್ತಳೆ ಸಿಪ್ಪೆ ಪುಡಿ – 2 ಟೇಬಲ್ ಸ್ಪೂನ್
ಮೊಸರು ಅಥವಾ ಹಾಲು – 1 ಟೇಬಲ್ ಸ್ಪೂನ್
ಜೇನು – 1 ಟೀ ಸ್ಪೂನ್
ಹೀಗೆ ತಯಾರಿಸಿ ಬಳಸಿ:
- ಕಿತ್ತಳೆ ಸಿಪ್ಪೆಗಳನ್ನು ಚೆನ್ನಾಗಿ ತೊಳೆದು ಸೂರ್ಯನ ಬಿಸಿಲಿನಲ್ಲಿ ಸಂಪೂರ್ಣ ಒಣಗಿಸಿ ಪುಡಿ ಮಾಡಿ.
- ಒಂದು ಬಟ್ಟಲಿನಲ್ಲಿ ಸಿಪ್ಪೆ ಪುಡಿ, ಮೊಸರು (ಅಥವಾ ಹಾಲು) ಮತ್ತು ಜೇನು ಹಾಕಿ ಮೃದುವಾದ ಪೇಸ್ಟ್ ತಯಾರಿಸಿ.
- ಮುಖವನ್ನು ತಣ್ಣೀರಿನಲ್ಲಿ ತೊಳೆದು ಈ ಪೇಸ್ಟ್ ಅನ್ನು ಹಚ್ಚಿ.15–20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಪಯೋಜನಗಳು:
- ಚರ್ಮದ ಮೇಲಿನ ಡೆಡ್ ಸೆಲ್‌ಗಳನ್ನು ತೆಗೆದು ನೈಸರ್ಗಿಕವಾಗಿ ಗ್ಲೋ ನೀಡುತ್ತದೆ.
- ಮೊಡವೆ, ಕಲೆ, ಪಿಗ್ಮೆಂಟೇಶನ್ ಕಡಿಮೆಯಾಗಲು ಸಹಕಾರಿ.
- ಚರ್ಮವನ್ನು ತಂಪಾಗಿ ಹಾಗೂ ಹೈಡ್ರೇಟ್ ಆಗಿ ಉಳಿಸುತ್ತದೆ.
- ನಿಯಮಿತವಾಗಿ ಬಳಸಿದರೆ ಚರ್ಮದ ಟೋನ್ ಸಮನಾಗುತ್ತದೆ.
ವಾರಕ್ಕೆ ಎರಡು ಬಾರಿ ಕಿತ್ತಳೆ ಸಿಪ್ಪೆಯ ಮಾಸ್ಕ್ ಬಳಸುವುದರಿಂದ ನಿಮ್ಮ ಚರ್ಮ ನೈಸರ್ಗಿಕವಾಗಿ ಹೊಳೆಯಲು ಪ್ರಾರಂಭಿಸುತ್ತದೆ!

