ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಮಲಗುವ ಮುನ್ನ ಮತ್ತು ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಸಿಗೆಯಿಂದ ಎದ್ದ ಕೂಡಲೇ ಮೊಬೈಲ್ ಪರದೆ ನೋಡುವುದರಿಂದ ಕಣ್ಣು, ಮೆದುಳು ಮತ್ತು ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಪರಿಣಾಮ ದೈನಂದಿನ ಜೀವನದ ಗುಣಮಟ್ಟಕ್ಕೂ ಹಾನಿಯುಂಟಾಗುತ್ತದೆ.

ಮೊಬೈಲ್‌ನ ನೀಲಿ ಬೆಳಕು ಕಣ್ಣುಗಳಿಗೆ ವಿಷದಂತೆ ಕೆಲಸ ಮಾಡುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಇದನ್ನು ನೋಡಿದರೆ ಕಣ್ಣು ಒಣಗುವುದು, ಉರಿಯೂತ ಮತ್ತು ತಲೆನೋವು ಉಂಟಾಗುತ್ತದೆ. ಜೊತೆಗೆ ಮಲಗಿಕೊಂಡೇ ಫೋನ್ ಬಳಸುವುದರಿಂದ ದೇಹದ ಭಂಗಿ ಹಾಳಾಗಿ ಕುತ್ತಿಗೆ, ಬೆನ್ನು ನೋವು ಮತ್ತು ದೀರ್ಘಾವಧಿಯಲ್ಲಿ ಬೆನ್ನುಹುರಿಗೆ ತೊಂದರೆ ಉಂಟಾಗಬಹುದು.
ಒತ್ತಡ ಮತ್ತು ಆತಂಕ ಹೆಚ್ಚಾಗುವುದು
ಮೊಬೈಲ್ ತೆರೆದ ತಕ್ಷಣ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ನಕಾರಾತ್ಮಕ ಸುದ್ದಿ ಮತ್ತು ಕಚೇರಿಯ ಒತ್ತಡದ ಸಂದೇಶಗಳು ಕಣ್ಣಿಗೆ ಬೀಳುತ್ತವೆ. ಇದರಿಂದ ದಿನದ ಆರಂಭವೇ ಆತಂಕ ಮತ್ತು ಚಿಂತೆಯಿಂದ ಕೂಡಿರುತ್ತದೆ.

ಮೆದುಳಿನ ಮೇಲೆ ನೇರ ಪರಿಣಾಮ
ಬೆಳಿಗ್ಗೆ ಎದ್ದಾಗ ಮೆದುಳು ಸಕಾರಾತ್ಮಕ ಆಲೋಚನೆಗಳನ್ನು ಸ್ವೀಕರಿಸಲು ಸಿದ್ಧವಾಗಿರುತ್ತದೆ. ಆದರೆ ಆ ಸಮಯದಲ್ಲಿ ಮೊಬೈಲ್ ಪರದೆಗೆ ಕಣ್ಣು ಹಾಯಿಸುವುದರಿಂದ ಮೆದುಳು ಮಾಹಿತಿಯ ಒತ್ತಡಕ್ಕೆ ಒಳಗಾಗಿ ದಣಿದುಹೋಗುತ್ತದೆ. ಇದರ ಪರಿಣಾಮವಾಗಿ ಗಮನಹರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.
ಕೆಲಸ ಮತ್ತು ಅಧ್ಯಯನದಲ್ಲಿ ಕುಸಿತ
ಫೋನ್ ವ್ಯಸನ ಬೆಳಿಗ್ಗೆಯಿಂದಲೇ ಪ್ರಾರಂಭವಾದರೆ ದಿನವಿಡೀ ಕೇಂದ್ರೀಕರಣ ಹಾಳಾಗುತ್ತದೆ. ಕೆಲಸದಲ್ಲಿ ತಪ್ಪುಗಳು, ಓದಿನಲ್ಲಿ ಆಸಕ್ತಿ ಕೊರತೆ ಮತ್ತು ಫಲಿತಾಂಶದಲ್ಲಿ ಕುಸಿತ ಕಂಡುಬರುತ್ತದೆ.
