ಹಾಗಲಕಾಯಿ ಅಂದರೆ ಬಹುತೇಕ ಜನರಿಗೆ ಕಹಿ ರುಚಿ ನೆನಪಾಗುತ್ತದೆ. ಆದರೆ ಈ ಕಹಿಯಲ್ಲಿಯೇ ಒಂದು ಅಚ್ಚರಿ ರುಚಿ ಅಡಗಿದೆ ಎಂಬುದನ್ನು ನೀವೊಮ್ಮೆ ಹಾಗಲಕಾಯಿ ಪಕೋಡಾ ತಿಂದರೆ ಖಚಿತವಾಗಿಯೇ ತಿಳಿಯುತ್ತೆ! ಸಾಯಂಕಾಲದ ಕಾಫಿಗೆ ಜತೆ ತಿನ್ನಲು, ಅಥವಾ ಊಟದ ಸೈಡ್ ಡಿಶ್ ಆಗಿ ಇವು ಸಖತ್ ರುಚಿಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ – 2 (ಸಣ್ಣಗೆ ಚೀಲಿಸಿದವು)
ಕಡಲೆಹಿಟ್ಟು – 1 ಕಪ್
ಅಕ್ಕಿಹಿಟ್ಟು – 2 ಟೇಬಲ್ ಸ್ಪೂನ್
ಹಿಂಗು – ಚಿಟಿಕೆ
ಮೆಣಸಿನ ಪುಡಿ – 1 ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ನೀರು – ಅಗತ್ಯವಿರುವಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ:
ಮೊದಲು ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸ್ಲೈಸ್ ಮಾಡಿ. ಬೇಕಾದರೆ ಉಪ್ಪಿನಲ್ಲಿ ಸ್ವಲ್ಪ ಸಮಯ ನೆನೆಸಿಟ್ಟು ಕಹಿಯನ್ನು ಕಡಿಮೆ ಮಾಡಬಹುದು.
ಒಂದು ಬಟ್ಟಲಿನಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ಅರಿಶಿನ, ಹಿಂಗು ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
ನೀರು ಸ್ವಲ್ಪಸ್ವಲ್ಪವಾಗಿ ಹಾಕುತ್ತಾ ಹದವಾದ ಪೇಸ್ಟ್ ತಯಾರಿಸಿ. ಈಗ ಹಾಗಲಕಾಯಿ ತುಂಡುಗಳನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಬಿಸಿ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.
ಹುರಿದ ಪಕೋಡಗಳನ್ನು ಟಿಶ್ಯೂ ಮೇಲೆ ಇಟ್ಟು ಎಣ್ಣೆ ತೆಗೆದು, ಟೊಮೆಟೋ ಸಾಸ್ ಅಥವಾ ಚಟ್ನಿಯೊಡನೆ ಬಿಸಿ ಬಿಸಿಯಾಗಿ ಸವಿಯಿರಿ.

