January22, 2026
Thursday, January 22, 2026
spot_img

Snacks | ಸ್ಟ್ರೀಟ್ ಸ್ಟೈಲ್ ಎಗ್ ರೋಲ್ ತಿನ್ಬೇಕು ಅಂತ ಆಸೆ ಆಗ್ತಿದ್ಯಾ? ಹಾಗಿದ್ರೆ ಮನೆಯಲ್ಲೇ ಒಮ್ಮೆ ಟ್ರೈ ಮಾಡಿ!

ಬೀದಿಗಳಲ್ಲಿ ಸಂಜೆ ಇಳಿದರೆ, ತವಾದ ಮೇಲೆ ಬಿಸಿಯಾದ ಪರೋಟಾ, ಅದರ ಮೇಲೆ ಹರಡಿದ ಮೊಟ್ಟೆ ಮತ್ತು ತರಕಾರಿಗಳ ಘಮಘಮ… ಈ ದೃಶ್ಯವೇ ಒಂದು ಹಸಿವಿನ ಕಥೆ ಹೇಳುತ್ತೆ. ಸ್ಟ್ರೀಟ್ ಸ್ಟೈಲ್ ಎಗ್ ರೋಲ್ ಅಂದ್ರೆ ಕೇವಲ ತಿಂಡಿ ಅಲ್ಲ, ಅದು ಒಂದು ಅನುಭವ. ಅದೇ ಅನುಭವವನ್ನು ಈಗ ಮನೆಯ ಅಡುಗೆಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ಪರೋಟಾ ಹಿಟ್ಟಿಗೆ

ಮೈದಾ – 1 ಕಪ್
ಉಪ್ಪು – ಚಿಟಿಕೆ
ಎಣ್ಣೆ – 1 ಟೀ ಸ್ಪೂನ್
ನೀರು – ಅಗತ್ಯವಿರುವಷ್ಟು

ಎಗ್ ಮತ್ತು ಫಿಲ್ಲಿಂಗ್‌ಗೆ

ಮೊಟ್ಟೆ – 2
ಈರುಳ್ಳಿ – ತೆಳುವಾಗಿ ಸ್ಲೈಸ್ ಮಾಡಿದ್ದು
ಕ್ಯಾರೆಟ್ – ತುರಿದದ್ದು
ಕ್ಯಾಪ್ಸಿಕಂ – ಸಣ್ಣ ತುಂಡುಗಳು
ಹಸಿಮೆಣಸು – ಸಣ್ಣದಾಗಿ ಕತ್ತರಿಸಿದದು
ಉಪ್ಪು – ರುಚಿಗೆ ತಕ್ಕಂತೆ
ಮೆಣಸಿನ ಪುಡಿ – ಸ್ವಲ್ಪ
ಚಾಟ್ ಮಸಾಲಾ – ಸ್ವಲ್ಪ
ಎಣ್ಣೆ ಅಥವಾ ಬೆಣ್ಣೆ – ಬೇಯಿಸಲು
ಟೊಮೇಟೊ ಸಾಸ್
ಹಸಿರು ಚಟ್ನಿ
ಮೇಯೊನೀಸ್

ತಯಾರಿಸುವ ವಿಧಾನ

ಮೊದಲು ಮೈದಾ, ಉಪ್ಪು, ಎಣ್ಣೆ ಸೇರಿಸಿ ಮೃದುವಾದ ಹಿಟ್ಟನ್ನು ಕಲಸಿ. ಸ್ವಲ್ಪ ಸಮಯ ಮುಚ್ಚಿಟ್ಟು ಬಿಡುವುದರಿಂದ ಪರೋಟಾ ಚೆನ್ನಾಗಿ ಸಾಫ್ಟ್ ಆಗುತ್ತದೆ. ನಂತರ ಹಿಟ್ಟನ್ನು ತೆಳುವಾಗಿ ಲಟ್ಟಿಸಿ ಬಿಸಿ ತವಾದಲ್ಲಿ ಹಾಕಿ. ಒಂದು ಬದಿಯಿಂದ ಸ್ವಲ್ಪ ಬೇಯಿಸಿದ ನಂತರ, ಮೊಟ್ಟೆಗೆ ಉಪ್ಪು–ಮೆಣಸು ಸೇರಿಸಿ ಕಲಸಿ, ಅದನ್ನು ಪರೋಟಾದ ಮೇಲೆ ಹರಡಿ. ತಿರುಗಿಸಿ ಎರಡೂ ಬದಿಯೂ ಚೆನ್ನಾಗಿ ಬೇಯಿಸಬೇಕು.

ಈಗ ಪರೋಟಾದ ಮೇಲೆ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಹಸಿಮೆಣಸು ಹಾಕಿ. ಮೇಲೆ ಚಾಟ್ ಮಸಾಲಾ ಮತ್ತು ನಿಮ್ಮ ಇಷ್ಟದ ಸಾಸ್‌ಗಳನ್ನು ಸೇರಿಸಿ. ಎಲ್ಲವೂ ಸೇರಿದ ಮೇಲೆ ನಿಧಾನವಾಗಿ ರೋಲ್ ಮಾಡಿ.

Must Read