Thursday, November 13, 2025

Snacks | ಸೂಪರ್ ಟೇಸ್ಟಿ ಆಲೂ ಟಿಕ್ಕಿ ಚಾಟ್ ತಿಂದಿದ್ದೀರಾ? ಏನ್ ರುಚಿ ಗೊತ್ತಾ?

ಚಾಟ್ ಪ್ರಿಯರ ಮನಸನ್ನು ಗೆಲ್ಲುವ ಅತ್ಯಂತ ಜನಪ್ರಿಯ ಸ್ಟ್ರೀಟ್ ಫುಡ್ ಅಂದರೆ ಆಲೂ ಟಿಕ್ಕಿ ಚಾಟ್. ಹೊರಗೆ ಕ್ರಿಸ್ಪಿ, ಒಳಗೆ ಮೃದು ಆಲೂ ಟಿಕ್ಕಿ ಮೇಲೆ ಚಟ್ನಿ, ಮೊಸರು ಮತ್ತು ಮಸಾಲೆಗಳ ರುಚಿ ಈ ಡಿಶ್ ಅನ್ನು ಇನ್ನು ಸೂಪರ್ ಟೇಸ್ಟಿ ಮಾಡುತ್ತೆ.

ಬೇಕಾಗುವ ಪದಾರ್ಥಗಳು:

ಬೇಯಿಸಿದ ಆಲೂಗಡ್ಡೆ – 3
ಬ್ರೆಡ್ ಕ್ರಂಬ್ಸ್ ಅಥವಾ ರವೆ – 3 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹಸಿಮೆಣಸು – 1 (ಕತ್ತರಿಸಿದ)
ಶುಂಠಿ ಪೇಸ್ಟ್ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಎಣ್ಣೆ – ಕರಿಯಲು

ಚಾಟ್ ಟಾಪಿಂಗ್‌ಗಾಗಿ:

ಹಸಿಮೆಣಸು ಚಟ್ನಿ – 2 ಟೀ ಸ್ಪೂನ್
ಸಿಹಿ ಇಮ್ಲಿ ಚಟ್ನಿ – 2 ಟೀ ಸ್ಪೂನ್
ಮೊಸರು – ¼ ಕಪ್ (ಸ್ವಲ್ಪ ಉಪ್ಪು ಹಾಕಿದ್ದು)
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ಟೊಮ್ಯಾಟೊ – 1 (ಕತ್ತರಿಸಿದ್ದು)
ಸೇವ್ ಅಥವಾ ಪಾಪಡಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಚಾಟ್ ಮಸಾಲಾ – ½ ಟೀ ಸ್ಪೂನ್

ತಯಾರಿಸುವ ವಿಧಾನ:

ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ, ಅದಕ್ಕೆ ಉಪ್ಪು, ಹಸಿಮೆಣಸು, ಶುಂಠಿ ಪೇಸ್ಟ್, ಗರಂ ಮಸಾಲಾ ಮತ್ತು ಬ್ರೆಡ್ ಕ್ರಂಬ್ಸ್ ಸೇರಿಸಿ ಮಿಶ್ರಣ ಮಾಡಿ.

ಈ ಮಿಶ್ರಣದಿಂದ ಸಣ್ಣ ಟಿಕ್ಕಿ ಆಕಾರದಲ್ಲಿ ಮಾಡಿ ಎಣ್ಣೆಯಲ್ಲಿ ಎರಡೂ ಬದಿಯೂ ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿ.

ಬಿಸಿ ಟಿಕ್ಕಿಯನ್ನು ಪ್ಲೇಟ್‌ನಲ್ಲಿ ಇಟ್ಟು, ಅದರ ಮೇಲೆ ಮೊಸರು, ಹಸಿಮೆಣಸು ಚಟ್ನಿ, ಸಿಹಿ ಚಟ್ನಿ ಹಾಕಿ. ಈರುಳ್ಳಿ, ಟೊಮ್ಯಾಟೊ, ಸೀವ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಮೇಲೆ ಚಾಟ್ ಮಸಾಲಾ ಹಾಕಿ ತಕ್ಷಣ ಸರ್ವ್ ಮಾಡಿ.

error: Content is protected !!