Wednesday, November 26, 2025

Snacks Series 1 | ಮಂಗಳೂರು ಸ್ಟೈಲ್ ಬಟಾಟೆ ಅಂಬಡೆ! ರುಚಿ ನೋಡಿದ್ದೀರಾ?

ಮಂಗಳೂರಿನ ತಿಂಡಿಗಳು ಅಂದ್ರೇ ರುಚಿ, ಸುವಾಸನೆ ಮತ್ತು ಪರಂಪರೆಯ ಅದ್ಭುತ ಮಿಶ್ರಣ. ಅದರಲ್ಲೂ ಬಟಾಟೆ ಅಂಬಡೆ ಎಂದರೆ ಮನೆಯಲ್ಲೇ ಸಿಂಪಲ್ ಸಾಮಾಗ್ರಿಗಳಿಂದ ತಯಾರಾಗುವ, ಆದರೆ ರುಚಿಯಲ್ಲಿ ಟಾಪ್ ಆಗಿರುವ ಸಂಜೆಯ ಎಣ್ಣೆ ತಿಂಡಿ. ಮಾಡೋದು ಕೂಡ ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – 3
ಈರುಳ್ಳಿ – 1
ಹಸಿಮೆಣಸು – 2
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಶುಂಠಿ – 1 ಟೀ ಸ್ಪೂನ್
ಕರಿಬೇವು – ಕೆಲವು
ನಿಂಬೆ ರಸ – 1 ಟೀ ಸ್ಪೂನ್
ಉಪ್ಪು – ರುಚಿಗೆ
ಒಗ್ಗರಣೆಗಾಗಿ ಎಣ್ಣೆ – 2 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – ½ ಟೀ ಸ್ಪೂನ್
ಹಿಂಗು – ಚಿಟಿಕೆ
ಕಡಲೆ ಹಿಟ್ಟು- ಸ್ವಲ್ಪ
ಅಕ್ಕಿ ಹಿಟ್ಟು- ಸ್ವಲ್ಪ
ಅರಿಶಿನ ಪುಡಿ
ಕೆಂಪು ಮೆಣಸಿನ ಪುಡಿ

ಮಾಡುವ ವಿಧಾನ:

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಹಿಂಗು ಹಾಕಿ ಒಗ್ಗರಣೆ ತಯಾರು ಮಾಡಿ. ಅದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ ಹಾಕಿ ಸ್ವಲ್ಪ ಸಮಯ ಹುರಿಯಿರಿ. ಈಗ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಹಾಕಿ ಮಿಶ್ರಣ ತಯಾರು ಮಾಡಿ.

ಈಗ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು, ಇಂಗು ಮತ್ತು ಬೇಕಿಂಗ್ ಪೌಡರ್ ಅನ್ನು ಸೇರಿಸಿ, ಗಟ್ಟಿಯಾದ ಹಿಟ್ಟನ್ನು ತಯಾರು ಮಾಡಿ. ಈಗ ಆಲೂಗಡ್ಡೆಯ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ, ಬಿಸಿ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಕರಿಯಿರಿ.

error: Content is protected !!