Sunday, December 14, 2025

Snacks Series 15 | ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗ್ತಿದೆ ಪಾಸ್ತಾ ಚಿಪ್ಸ್: ಕ್ರಿಸ್ಪಿ & ಟ್ರೆಂಡಿ ಸ್ನ್ಯಾಕ್! ನೀವೂ ಟ್ರೈ ಮಾಡಿ

ಸಾಧಾರಣ ಪಾಸ್ತಾವನ್ನು ವಿಭಿನ್ನವಾಗಿ, ಮಕ್ಕಳಿಂದ ದೊಡ್ಡವರ ತನಕ ಎಲ್ಲರಿಗೂ ಇಷ್ಟವಾಗುವಂತೆ ತಯಾರಿಸಬಹುದು ಅಂದ್ರೆ ಅದು ಪಾಸ್ತಾ ಚಿಪ್ಸ್. ಇತ್ತೀಚೆಗೆ ಟ್ರೆಂಡಿಂಗ್ ಆಗಿರುವ ಈ ರೆಸಿಪಿ ಟೀ ಟೈಮ್ ಸ್ನ್ಯಾಕ್‌ಗೂ, ಪಾರ್ಟಿ ಸ್ಟಾರ್ಟರ್‌ಗೂ ಸೂಪರ್ ಆಯ್ಕೆ. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ಪಾಸ್ತಾ ಚಿಪ್ಸ್ ರುಚಿಯ ಜೊತೆಗೆ ಕ್ರಂಚಿಯನ್ನೂ ಕೊಡುತ್ತದೆ.

ಬೇಕಾಗುವ ಪದಾರ್ಥಗಳು

ಪಾಸ್ತಾ (ನಿಮಗೆ ಬೇಕಾದ ಆಕಾರದ್ದು) – 1 ಕಪ್
ನೀರು – ಬೇಯಿಸಲು
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – 2 ಟೇಬಲ್‌ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಕರಿಮೆಣಸು ಪುಡಿ – ½ ಟೀಸ್ಪೂನ್
ಬೆಳ್ಳುಳ್ಳಿ ಪುಡಿ – ½ ಟೀಸ್ಪೂನ್
ಓರಿಗ್ಯಾನೋ – ½ ಟೀಸ್ಪೂನ್
ಚಾಟ್ ಮಸಾಲಾ – ½ ಟೀಸ್ಪೂನ್ (ಐಚ್ಛಿಕ)

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಸಿ, ಉಪ್ಪು ಹಾಕಿ ಪಾಸ್ತಾವನ್ನು ಚೆನ್ನಾಗಿ ಬೇಯಿಸಿ. ತುಂಬಾ ಸಾಫ್ಟ್ ಆಗಿ ಬೇಯಿಸುವುದು ಬೇಡ. ನಂತರ ನೀರು ಚೆನ್ನಾಗಿ ಸೋಸಿ ಪಾಸ್ತಾವನ್ನು ಒಣಗಲು ಬಿಡಿ.

ಒಂದು ಬೌಲಿನಲ್ಲಿ ಬೇಯಿಸಿದ ಪಾಸ್ತಾಗೆ ಎಣ್ಣೆ, ಕೆಂಪು ಮೆಣಸಿನ ಪುಡಿ, ಕರಿಮೆಣಸು, ಬೆಳ್ಳುಳ್ಳಿ ಪುಡಿ, ಓರಿಗ್ಯಾನೋ ಹಾಗೂ ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಪ್ಯಾನ್‌ನಲ್ಲಿ ಅಥವಾ ಏರ್ ಫ್ರೈಯರ್‌ನಲ್ಲಿ ಪಾಸ್ತಾವನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ರೋಸ್ಟ್ ಅಥವಾ ಫ್ರೈ ಮಾಡಿ. ಓವನ್‌ನಲ್ಲಿ ಬೇಕಾದರೂ 180 ಡಿಗ್ರಿಯಲ್ಲಿ 15–20 ನಿಮಿಷ ಬೇಯಿಸಬಹುದು.

ಬಿಸಿ ಬಿಸಿ ಪಾಸ್ತಾ ಚಿಪ್ಸ್‌ನ್ನು ಟೊಮೆಟೊ ಸಾಸ್ ಅಥವಾ ಮೇಯೋನೀಸ್ ಜೊತೆ ಸರ್ವ್ ಮಾಡಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

error: Content is protected !!