ಸಂಜೆಯ ಹೊತ್ತಿಗೆ ಚಹಾ ಜೊತೆಗೆ ಏನಾದರೂ ಲೈಟ್ ಆಗಿ, ರುಚಿಯಾಗಿ ತಿನ್ನಬೇಕು ಅನ್ನಿಸಿದಾಗ ದಹಿ ಟೋಸ್ಟ್ ಮಾಡಿ. ಕಡಿಮೆ ಪದಾರ್ಥಗಳಲ್ಲಿ, ಹೆಚ್ಚು ಸಮಯ ತೆಗೆದುಕೊಳ್ಳದೆ ಮಾಡುವ ಈ ಸ್ನ್ಯಾಕ್ ಮಕ್ಕಳಿಗೂ ಇಷ್ಟವಾಗುತ್ತೆ ಜೊತೆಗೆ ಆರೋಗ್ಯಕ್ಕೂ ಒಂದು ರೀತಿ ಒಳ್ಳೆದೇ.
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಸ್ಲೈಸ್‌ಗಳು, ಮೊಸರು, ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಂ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ, ಜೀರಿಗೆ ಪುಡಿ, ಬೆಣ್ಣೆ ಅಥವಾ ಎಣ್ಣೆ.
ಮಾಡುವ ವಿಧಾನ:
ಮೊದಲು ಒಂದು ಬೌಲ್‌ನಲ್ಲಿ ಮೊಸರು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಂ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಉಪ್ಪು, ಮೆಣಸಿನ ಪುಡಿ ಹಾಗೂ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕಲಸಿ.
ತವಾ ಬಿಸಿ ಮಾಡಿ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಚ್ಚಿ. ಈಗ ಬ್ರೆಡ್ ಸ್ಲೈಸ್ ಗಳನ್ನೂ ಮೊಸರಿನ ಮಿಶ್ರಣದಲ್ಲಿ ಎರಡು ಬದಿ ಅದ್ದಿ ತವಾದ ಮೇಲಿಟ್ಟು ಇಟ್ಟು ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ 2 ಬದಿ ಬೇಯಿಸಿ.

