ಸಂಜೆಯ ಹೊತ್ತಿನಲ್ಲಿ ಚಹಾ ಕುಡಿಯೋ ಟೈಮ್ ನಲ್ಲಿ ಬಾಯಲ್ಲಿ ಕರಗುವ ಬಿಸ್ಕೆಟ್ ಸಿಕ್ಕರೆ ಆನಂದವೇ ಬೇರೆ. ಅಂಗಡಿಯ ಬಿಸ್ಕೆಟ್‌ಗಿಂತ ಮನೆಯಲ್ಲೇ ತಯಾರಿಸಿದ ಗೋಡಂಬಿ ಬಿಸ್ಕೆಟ್ ಆರೋಗ್ಯಕರವೂ ಹೌದು, ರುಚಿಯಲ್ಲೂ ಸೂಪರ್. ಕಡಿಮೆ ಪದಾರ್ಥಗಳಲ್ಲಿ ಸುಲಭವಾಗಿ ಮಾಡುವ ಈ ರೆಸಿಪಿ, ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಸ್ನ್ಯಾಕ್.
ಅವಶ್ಯಕ ಪದಾರ್ಥಗಳು
ಮೈದಾ – 1 ಕಪ್
ಪುಡಿ ಸಕ್ಕರೆ – ½ ಕಪ್
ಬೆಣ್ಣೆ – ½ ಕಪ್
ಗೋಡಂಬಿ – ½ ಕಪ್ (ಸಣ್ಣ ತುಂಡುಗಳು)
ಏಲಕ್ಕಿ ಪುಡಿ – ½ ಟೀ ಸ್ಪೂನ್
ಉಪ್ಪು – ಚಿಟಿಕೆ
ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ಬೆಣ್ಣೆ ಮತ್ತು ಪುಡಿ ಸಕ್ಕರೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಕ್ರೀಮಿ ಆಗುವವರೆಗೆ ಕಲಸಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ಉಪ್ಪು ಸೇರಿಸಿ. ನಂತರ ಮೈದಾವನ್ನು ಹಂತ ಹಂತವಾಗಿ ಸೇರಿಸಿ ಮೃದುವಾದ ಮಿಶ್ರಣ ಮಾಡಿ. ಕೊನೆಗೆ ಕತ್ತರಿಸಿದ ಗೋಡಂಬಿಯನ್ನು ಹಾಕಿ ಲೈಟ್ ಆಗಿ ಮಿಕ್ಸ್ ಮಾಡಿ.
ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ಒತ್ತಿ ಬಿಸ್ಕೆಟ್ ಆಕಾರ ಕೊಡಿ. ಓವನ್‌ನ್ನು 170 ಡಿಗ್ರಿ ಸೆಲ್ಸಿಯಸ್‌ಗೆ ಪ್ರಿಹೀಟ್ ಮಾಡಿ, ಬಿಸ್ಕೆಟ್‌ಗಳನ್ನು ಟ್ರೇಯಲ್ಲಿ ಇಟ್ಟು ಸುಮಾರು 15–18 ನಿಮಿಷ ಬೇಯಿಸಿ. ಕೆಳಭಾಗ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿದರೆ ಸಾಕು. ತಣ್ಣಗಾದ ನಂತರ ಬಿಸ್ಕೆಟ್‌ಗಳು ಕ್ರಿಸ್ಪಿ ಆಗುತ್ತವೆ.

