ಚಹಾದ ಜೊತೆ ಬಿಸಿ ಬಿಸಿ ತಿಂಡಿ ಬೇಕೆನಿಸುವುದು ಎಲ್ಲರಿಗೂ ಸಹಜ. ಬಟಾಟೆ, ಗೆಣಸು, ಬಾಳೆಕಾಯಿ ಬಜ್ಜಿ ತಿಂದು ಬೇಜಾರಾಗಿದ್ರೆ ಬದನೆಕಾಯಿ ಬಜ್ಜಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಬದನೆಕಾಯಿ – 2
ಕಡಲೆಹಿಟ್ಟು – 1 ಕಪ್
ಅಕ್ಕಿಹಿಟ್ಟು – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಾರದ ಪುಡಿ – 1 ಚಮಚ
ಅರಶಿನ ಪುಡಿ – ಚಿಟಿಕೆ
ಜೀರಿಗೆ – ½ ಚಮಚ
ಅಜ್ವಾಯಿನ್ – ಚಿಟಿಕೆ
ನೀರು – ಅಗತ್ಯವಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ:
ಮೊದಲು ಬದನೆಕಾಯಿಯನ್ನು ಉದ್ದವಾಗಿ ಅಥವಾ ವೃತ್ತಾಕಾರವಾಗಿ ತುಂಡು ಮಾಡಿಕೊಳ್ಳಿ. ಒಂದು ಬೌಲ್‌ನಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಕಾರದ ಪುಡಿ, ಅರಶಿನ, ಜೀರಿಗೆ ಮತ್ತು ಅಜ್ವಾಯಿನ್ ಸೇರಿಸಿ ನೀರು ಹಾಕಿ ಗಟ್ಟಿಯಾದ ಮಿಶ್ರಣ ತಯಾರಿಸಿಕೊಳ್ಳಿ.
ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿದ ಬಳಿಕ ಬದನೆಕಾಯಿ ತುಂಡುಗಳನ್ನು ಈ ಬ್ಯಾಟರ್‌ನಲ್ಲಿ ಮುಳುಗಿಸಿ ಬಿಸಿ ಎಣ್ಣೆಗೆ ಹಾಕಿ. ಮಧ್ಯಮ ಉರಿಯಲ್ಲಿ ಬಂಗಾರದ ಬಣ್ಣ ಬರುವ ತನಕ ಹುರಿಯಿರಿ. ಬಿಸಿ ಬಿಸಿ ಬದನೆಕಾಯಿ ಬಜ್ಜಿ ಚಟ್ನಿ ಅಥವಾ ಸಾಸ್ ಜೊತೆ ಸವಿಯಿರಿ.

