ಸಂಜೆಯ ಚಹಾ ಸಮಯಕ್ಕೆ ಏನಾದರೂ ಬಿಸಿ ಬಿಸಿ ತಿನ್ಬೇಕು ಅಂದ್ರೆ ತಕ್ಷಣ ನೆನಪಾಗೋದು ಕ್ರಿಸ್ಪಿ ಆನಿಯನ್ ರಿಂಗ್ಸ್. ಹೊರಗೆ ಆರ್ಡರ್ ಮಾಡಿದಷ್ಟು ರುಚಿಯಾಗಿ ಮತ್ತು ಸುಲಭವಾಗಿಯೇ ಮನೆಯಲ್ಲೂ ತಯಾರಿಸಿಕೊಳ್ಳಬಹುದಾದ ಈ ಸ್ನ್ಯಾಕ್ ಮಕ್ಕಳಿಗಂತೂ ಭಾರೀ ಫೇವರಿಟ್.
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ ದೊಡ್ಡದು – 2
ಮೈದಾ ಹಿಟ್ಟು – ½ ಕಪ್
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಅಕ್ಕಿ ಹಿಟ್ಟು – 2 ಟೇಬಲ್ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೇಕಿಂಗ್ ಸೋಡಾ – ಚಿಟಿಕೆ
ತಣ್ಣನೆಯ ನೀರು – ಅಗತ್ಯವಷ್ಟು
ಎಣ್ಣೆ – ಡೀಪ್ ಫ್ರೈಗೆ
ತಯಾರಿಸುವ ವಿಧಾನ:
ಮೊದಲು ಈರುಳ್ಳಿಯನ್ನು ರಿಂಗ್ ರೂಪದಲ್ಲಿ ಕತ್ತರಿಸಿ, ಬೇರ್ಪಡಿಸಿ ಇಡಿ. ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಮೆಣಸು ಪುಡಿ, ಉಪ್ಪು ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ನಿಧಾನವಾಗಿ ತಣ್ಣನೆಯ ನೀರನ್ನು ಸೇರಿಸಿ, ದಪ್ಪವಾದ ದ್ರವ ರೂಪದ ಬ್ಯಾಟರ್ ತಯಾರಿಸಿಕೊಳ್ಳಿ. ಈರುಳ್ಳಿ ರಿಂಗ್‌ಗಳನ್ನು ಈ ಬ್ಯಾಟರ್‌ನಲ್ಲಿ ಚೆನ್ನಾಗಿ ಮುಳುಗಿಸಿ.
ಬಾಣಲೆಯಲ್ಲಿ ಎಣ್ಣೆ ಚೆನ್ನಾಗಿ ಬಿಸಿ ಮಾಡಿ, ಈರುಳ್ಳಿ ರಿಂಗ್‌ಗಳನ್ನು ನಿಧಾನವಾಗಿ ಎಣ್ಣೆಗೆ ಹಾಕಿ. ಮಧ್ಯಮ ಉರಿಯಲ್ಲಿ ಗೋಲ್ಡ್‌ನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ನಂತರ ಪೇಪರ್ ಟಿಷ್ಯೂ ಮೇಲೆ ಇಟ್ಟು ಹೆಚ್ಚುವರಿ ಎಣ್ಣೆ ತೆಗೆದುಹಾಕಿ.

