Wednesday, December 10, 2025

Snacks Series 9 | ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ! ಏನ್ ಟೇಸ್ಟ್ ಗೊತ್ತಾ?

ಈಗ ಸಧ್ಯ ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡಿಂಗ್ ನಲ್ಲಿರೋ ಒಂದು ತಿಂಡಿ ಅಂದ್ರೆ ಅದು ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ. ಕೇವಲ ಖಾರ ಮಾತ್ರವಲ್ಲದೆ, ಖರ್ಜೂರದ ಸಿಹಿ, ನಿಂಬೆಹುಳಿ ಮತ್ತು ವಿನೆಗರ್‌ನ ಹುಳಿಯನ್ನು ಸೇರಿಸಿ, ಖಾರ ಮತ್ತು ಸಿಹಿಯ ಪರಿಪೂರ್ಣ ಸಮತೋಲನ ನೀಡುವ ಮಸಾಲಾ ಚಕ್ಕುಲಿ ಇದು.

ಬೇಕಾಗುವ ಪದಾರ್ಥಗಳು

ಖರ್ಜೂರ : 6 (ಬೀಜ ತೆಗೆದದ್ದು)
ಕಾಶ್ಮೀರಿ ಚಿಲ್ಲಿ ಪೌಡರ್ : 2 ಟೇಬಲ್ ಚಮಚ
ವಿನೆಗರ್ : 1/4 ಟೀಸ್ಪೂನ್
ನಿಂಬೆ ರಸ: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಖರ್ಜೂರದ ಬೀಜ ತೆಗೆದು ಮಿಕ್ಸಿ ಜಾರ್‌ಗೆ ಹಾಕಿ, ಅದಕ್ಕೆ ಕಾಶ್ಮೀರಿ ಚಿಲ್ಲಿ ಪೌಡರ್, ವಿನೆಗರ್, ನಿಂಬೆ ರಸ ಮತ್ತು ಉಪ್ಪು ಹಾಕಿ. ಎಲ್ಲವನ್ನೂ ಸೇರಿಸಿ ನುಣ್ಣಗಿನ ಪೇಸ್ಟ್ ಮಾಡಿ. ಉಪ್ಪು ಅಥವಾ ನಿಂಬೆರಸ ಬೇಕಿದ್ದರೆ ಸರಿಹೊಂದಿಸಿಕೊಳ್ಳಿ.

ಈ ಮಸಾಲಾ ಪೇಸ್ಟ್‌ನ್ನು ಚಕ್ಕುಲಿ ಅಥವಾ ಇನ್ಯಾವುದೇ ಕುರುಕಲು ತಿಂಡಿಯ ಮೇಲೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿದರೆ ಕಾಸರಗೋಡು ಸ್ಟೈಲ್ ಮಸಾಲಾ ಚಕ್ಕುಲಿ ರೆಡಿ.

error: Content is protected !!