Tuesday, October 21, 2025

CINE | ಭಾನುವಾರ ಒಂದೇ ದಿನ ಇಷ್ಟು ಕೋಟಿ ಕಲೆಕ್ಷನ್‌! ಒಟ್ಟಾರೆ ಗಲ್ಲಾಪೆಟ್ಟಿಗೆಯಲ್ಲಿ ಇರೋದೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ, ನಿರ್ದೇಶಕ, ಬರಹಗಾರ ರಿಷಭ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ – 1 ಸಿನಿಮಾ ಬಾಕ್ಸ್‌ ಆಫೀಸ್‌ ಅಲ್ಲಾಡಿಸಿದೆ. ಕಾಂತಾರ ಸಿನಿಮಾ ರಿಲೀಸ್‌ ಆಗಿ ಎರಡು ವಾರ ಕಳೆದಿದ್ದು, ಬಹುತೇಕರು ಈಗಾಗಲೇ ಸಿನಿಮಾ ನೋಡಿದ್ದಾರೆ.

ನೋಡಲೇಬೇಕು ಸ್ವಲ್ಪ ರಶ್‌ ಕಡಿಮೆಯಾಗಲಿ ಎಂದು ಕೆಲವರು ಕಾದರೆ, ಟಿಕೆಟ್‌ ಹಣ ಕಡಿಮೆಯಾಗ್ಲಿ ಹೋಗೋಣ ಎಂದು ಕಾಯುತ್ತಿರುವವರೂ ಇದ್ದಾರೆ. ಈ ಮಧ್ಯೆಯೇ ವೀಕೆಂಡ್‌ನಲ್ಲಿ ಕಾಂತಾರ 80 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ.

ಈ ಸಿನಿಮಾ ವರ್ಲ್ಡ್‌ ವೈಡ್‌ ಕಲೆಕ್ಷನ್‌ ಈಗಾಗಲೇ 600 ಕೋಟಿ ದಾಟಿದೆ ಎನ್ನಲಾಗಿದೆ. ಇನ್ನು ಒಂದು ತಿಂಗಳು ಜನರು ಸಿನಿಮಾ ನೋಡಿದರೂ ಈ ಫಿಲಂ ಸಾವಿರ ಕೋಟಿ ರೂ. ಕ್ಲಬ್‌ ಸೇರೋದು ಗ್ಯಾರಂಟಿ!

error: Content is protected !!