ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಂಚಿನಿಂದ ತೆಗೆದ ದೋಸೆ ತಟ್ಟೆಗೆ ಹಾಕೋದ್ರಲ್ಲಿ ತಣ್ಣಗಾಗ್ತಿದೆ, ಗಟ್ಟಿಯಾದ ಕೊಬ್ಬರಿ ಎಣ್ಣೆ ಬಿಸಿ ಮಾಡೋಕೆ ಕುದಿಯೋ ನೀರು ಬೇಕಾಗಿದೆ. ಮಧ್ಯಾಹ್ನ ಮಲಗಿ ಎದ್ದರೆ ಎಲ್ಲಿದ್ದೇನೆ, ಎಷ್ಟೊತ್ತಾಗಿದೆ ಅನ್ನೋದೇ ಗೊತ್ತಾಗದಂತಾಗಿದೆ. ಇದು ಬೆಂಗಳೂರೋ ಅಥವಾ ಯಾವುದೋ ಹಿಲ್‌ಸ್ಟೇಷನ್ನೋ ಗೊತ್ತಾಗ್ತಿಲ್ಲ!
ರಾಜಧಾನಿ ಬೆಂಗಳೂರಿನಲ್ಲಿ ದಾಖಲೆ ಚಳಿ ಇದೆ, ಜನ ಬೆಂಗಳೂರನ್ನು ಲಂಡನ್ ಅಂತಿದ್ದಾರೆ. ಮಧ್ಯಾಹ್ನ ಮೂರು ಗಂಟೆಯಾಗಿದ್ರೂ ಬೆಂಗಳೂರು ಬೆಳಗಿನ ಜಾವ ಆರು ಗಂಟೆ ಫೀಲ್ ಕೊಡ್ತಿದೆ. ಜಿಟಿಜಿಟಿ ಮಂಜು, ಖಾಲಿ ರಸ್ತೆಗಳು ಬೆಂಗಳೂರಿನ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬರೀ ಬೆಂಗಳೂರು ವೆದರ್ ವಿಡಿಯೋ, ಫೋಟೊಗಳೇ ವೈರಲ್ ಆಗಿವೆ.
Bengaluru is bengaluring ❄️| ಸೋಶಿಯಲ್ ಮೀಡಿಯಾ ತುಂಬಾ ರಾಜಧಾನಿ ವೆದರ್‌ದೇ ಚರ್ಚೆ

