April 10, 2026
Friday, April 10, 2026
spot_img

ಟ್ರೆಂಡಿಂಗ್ ನಲ್ಲಿದೆ ಸೋಲೋ ಡೇಟ್: ನೀವೂ ಹೋಗೋಕೆ ಇಷ್ಟಪಡ್ತಿರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಒಂದು ಪದ ಪದೇಪದೇ ಕಣ್ಣಿಗೆ ಬೀಳುತ್ತಿದೆ “ಸೋಲೋ ಡೇಟ್”. ಸ್ನೇಹಿತರು ಇಲ್ಲ, ಸಂಗಾತಿ ಇಲ್ಲ… ಆದರೂ ಹೊರಗೆ ಹೋಗಿ ತಮ್ಮನ್ನೇ ತಮ್ಮಿಂದಲೇ ಟ್ರೀಟ್ ಮಾಡಿಕೊಳ್ಳುವ ಈ ಕಲ್ಪನೆ ಈಗ ಯುವಜನರ ನಡುವೆ ಹೊಸ ಟ್ರೆಂಡ್ ಆಗಿ ವೈರಲ್ ಆಗುತ್ತಿದೆ. “ನಿಮ್ಮನ್ನು ನೀವು ಡೇಟ್ ಮಾಡಿ” ಎನ್ನುವ ಈ ಕಾನ್ಸೆಪ್ಟ್ ಈಗ ಹಲವರ ಗಮನ ಸೆಳೆಯುತ್ತಿದೆ.

ಏನು ಈ ಸೋಲೋ ಡೇಟ್?
ಸೋಲೋ ಡೇಟ್ ಅಂದರೆ ಒಬ್ಬರೇ ಸಿನಿಮಾ ನೋಡುವುದು, ಕಫೆಗೇ ಹೋಗಿ ಕಾಫಿ ಕುಡಿಯುವುದು, ಪುಸ್ತಕ ಓದುತ್ತಾ ಸಮಯ ಕಳೆಯುವುದು ಅಥವಾ ಮನಸ್ಸಿಗೆ ಇಷ್ಟವಾದ ಸ್ಥಳಕ್ಕೆ ಭೇಟಿ ನೀಡುವುದು. ಯಾರೂ ಜೊತೆಗಿಲ್ಲದಿದ್ದರೂ ಸ್ವತಃ ತಮ್ಮ ಜೊತೆ ಸಮಯ ಕಳೆಯುವುದೇ ಇದರ ವಿಶೇಷತೆ.

ಯಾಕೆ ಹೆಚ್ಚಾಗಿದೆ ಈ ಟ್ರೆಂಡ್?
ಇಂದಿನ ವೇಗದ ಜೀವನದಲ್ಲಿ ಜನರು ಸದಾ ಬ್ಯುಸಿಯಾಗಿದ್ದಾರೆ. ಕೆಲಸದ ಒತ್ತಡ ಮತ್ತು ಸಾಮಾಜಿಕ ಜವಾಬ್ದಾರಿಗಳ ನಡುವೆ ಕೆಲವರು ತಮ್ಮ ಮನಸ್ಸಿಗೆ ಸ್ವಲ್ಪ ವಿರಾಮ ನೀಡಲು ಸೋಲೋ ಡೇಟ್ ಆಯ್ಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಸೋಲೋ ಡೇಟ್ ಕೆಲವರಿಗೆ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಹಿತವನ್ನು ನೀಡುತ್ತದೆ. ಒಂಟಿಯಾಗಿ ಸಮಯ ಕಳೆಯುವಾಗ ತಮ್ಮ ಆಸಕ್ತಿಗಳು ಮತ್ತು ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಅವಕಾಶವೂ ಸಿಗುತ್ತದೆ.

ಇದರಿಂದಲೇ ಇತ್ತೀಚೆಗೆ ಯುವಕರಲ್ಲಿ ಸೋಲೋ ಡೇಟ್ ಟ್ರೆಂಡ್ ಭಾರೀ ವೇಗದಲ್ಲಿ ಹರಡುತ್ತಿದೆ. ಈಗ ಪ್ರಶ್ನೆ ಒಂದೇ — ಈ ಟ್ರೆಂಡ್ ನೋಡಿದ ಮೇಲೆ ನೀವೂ ಒಮ್ಮೆ ಸೋಲೋ ಡೇಟ್ ಟ್ರೈ ಮಾಡುತ್ತೀರಾ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !