Saturday, January 10, 2026

ಸೋಮನಾಥ ಸ್ವಾಭಿಮಾನ ಪರ್ವ | ಸೋಮನಾಥ ಭೇಟಿಯ ಫೋಟೊ ಹಂಚಿಕೊಳ್ಳಿ: ಭಕ್ತರಿಗೆ ಪ್ರಧಾನಿ ಮೋದಿ ವಿಶೇಷ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿ ಇಂದಿನಿಂದ ‘ಸೋಮನಾಥ ಸ್ವಾಭಿಮಾನ ಪರ್ವ’ಕ್ಕೆ ಅಧಿಕೃತವಾಗಿ ಚಾಲನೆ ದೊರೆತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿರುವ ಭಕ್ತರು ತಮ್ಮ ಅನುಭವದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಸಾವಿರ ವರ್ಷಗಳ ಹಿಂದೆ 1026ರ ಜನವರಿಯಲ್ಲಿ ಸೋಮನಾಥ ದೇವಾಲಯ ಮೊದಲ ಬಾರಿಗೆ ದಾಳಿಯನ್ನು ಎದುರಿಸಿತು ಎಂದು ಸ್ಮರಿಸಿದ್ದಾರೆ. ಆ ದಾಳಿ ಹಾಗೂ ನಂತರ ನಡೆದ ಅನೇಕ ಆಕ್ರಮಣಗಳು ಭಾರತೀಯರ ಶಾಶ್ವತ ನಂಬಿಕೆ ಮತ್ತು ನಾಗರಿಕ ಸಂಸ್ಕೃತಿಯನ್ನು ಕುಗ್ಗಿಸಲಿಲ್ಲ. ಬದಲಾಗಿ, ಅವು ಭಾರತದ ಸಾಂಸ್ಕೃತಿಕ ಏಕತೆಯನ್ನು ಮತ್ತಷ್ಟು ಬಲಪಡಿಸಿವೆ ಎಂದು ಅವರು ಹೇಳಿದ್ದಾರೆ. ಮರುಮರು ನಿರ್ಮಾಣಗೊಂಡ ಸೋಮನಾಥ ದೇವಾಲಯ ಭಾರತದ ಅಚಲ ಆತ್ಮವಿಶ್ವಾಸದ ಸಂಕೇತವಾಗಿದೆ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Rice series 14 | ಮನೆಯಲ್ಲೇ ಸುಲಭವಾಗಿ ಮಾಡಿ ಫ್ಲೇವರ್ ಫುಲ್ ಕೊಕೊನಟ್ ರೈಸ್!

ಮೋದಿ ತಮ್ಮ ಹಿಂದಿನ ಸೋಮನಾಥ ಭೇಟಿಗಳ ಕೆಲವು ಚಿತ್ರಗಳನ್ನು ಹಂಚಿಕೊಂಡು, #SomnathSwabhimanParv ಹ್ಯಾಷ್‌ಟ್ಯಾಗ್ ಮೂಲಕ ಜನರು ಫೋಟೊಗಳನ್ನು ಹಂಚಿಕೊಳ್ಳುವಂತೆ ಕರೆ ನೀಡಿದ್ದಾರೆ. ಪ್ರಧಾನಿ ಜನವರಿ 11ರಂದು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

error: Content is protected !!