March 11, 2026
Wednesday, March 11, 2026
spot_img

ಅಮ್ಮನ ಕೊನೆಯ ಆಸೆ ಈಡೇರಿಸಿದ ಮಗ: ವೈದ್ಯಕೀಯ ಲೋಕಕ್ಕೆ ಅರ್ಪಣೆಯಾದ ಶತಾಯುಷಿಯ ದೇಹ

ಹೊಸದಿಗಂತ ಬೆಳಗಾವಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ 101 ವರ್ಷದ ಶತಾಯುಷಿ ಸುಶೀಲಾದೇವಿ ರಾಮಣ್ಣವರ್ ಅವರು ನಿಧನದ ನಂತರ ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಬಳಸಬೇಕೆಂದು ಇಚ್ಛಿಸಿದ್ದರು. ಅವರ ಆಸೆಯಂತೆ, ಮಗ ಡಾ. ಮಹಾಂತೇಶ್ ರಾಮಣ್ಣವರ್ ಅವರು ತಾಯಿಯ ಮೃತದೇಹವನ್ನು ಬೆಳಗಾವಿಯ ಕೆ.ಎಲ್.ಇ ಆಯುರ್ವೇದ ಮಹಾವಿದ್ಯಾಲಯಕ್ಕೆ ದಾನ ಮಾಡಿದ್ದಾರೆ.

ಸುಶೀಲಾದೇವಿ ಅವರ ಕಣ್ಣು ಮತ್ತು ಚರ್ಮವನ್ನು ಕೂಡ ದಾನ ಮಾಡುವ ಮೂಲಕ ಇತರರಿಗೆ ಮರುಜೀವ ನೀಡಲಾಗಿದೆ. ಇವರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ಬಳಸಿಕೊಳ್ಳಲಾಗುವುದು.

ಈ ಹಿಂದೆ ಡಾ. ಮಹಾಂತೇಶ್ ಅವರು ತಮ್ಮ ತಂದೆಯ ಮೃತದೇಹವನ್ನೂ ದಾನ ಮಾಡಿ ಮಾದರಿಯಾಗಿದ್ದರು. ಇವರ ಪ್ರೇರಣೆಯಿಂದ ಈಗಾಗಲೇ ಸಾವಿರಾರು ಜನರು ದೇಹದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡಿದ ಈ ಕುಟುಂಬದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !