Friday, September 26, 2025

ಸೋನಮ್ ವಾಂಗ್‌ಚುಕ್ ಬಂಧನ: ಲೇಹ್’ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಡಾಖ್ ಘರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ.

ಇದಾದ ಕೆಲವೇ ಗಂಟೆಗಳ ನಂತರ,ಲೇಹ್’ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನ ಸ್ಥಗಿತಗೊಳಿಸಿದೆ.

ವಾಂಗ್‌ಚುಕ್ ಅವರ ಲಾಭರಹಿತ ‘ಲಡಾಖ್‌ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳುವಳಿ’ (SECMOL) ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ಅಥವಾ FCRA, 2010 ರ ಅಡಿಯಲ್ಲಿ ವಿದೇಶದಿಂದ ಹಣವನ್ನು ಪಡೆಯುವ ನೋಂದಣಿಯನ್ನು ಗೃಹ ಸಚಿವಾಲಯ (MHA) ರದ್ದುಗೊಳಿಸಿತ್ತು. ಈ ಬೆನ್ನಲ್ಲೇ ವಾಂಗ್ ಚುಕ್ ಅವರನ್ನೂ ಬಂಧಿಸಲಾಗಿದೆ.

ಇದನ್ನೂ ಓದಿ