Monday, December 22, 2025

ತೆಲಂಗಾಣದಲ್ಲಿ ಕ್ರಿಸ್ಮಸ್ ಆಚರಣೆ ಹಿಂದಿದೆ ಸೋನಿಯಾ ಗಾಂಧಿಯ ಅತೀ ದೊಡ್ಡ ತ್ಯಾಗ: ಸಿಎಂ ರೇವಂತ್ ರೆಡ್ಡಿ ವಿವಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದೆಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಶುರುವಾಗಿದೆ.ಈ ಮದ್ಯೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೀಡಿದ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ತೆಲಂಗಾಣದಲ್ಲಿ ಕ್ರಿಸ್ಮಸ್ ಆಚರಣೆ ಕೇವಲ ಸೋನಿಯಾ ಗಾಂಧಿ ತ್ಯಾಗದಿಂದ ಮಾತ್ರ ಸಾಧ್ಯವಾಗಿದೆ. ಸೋನಿಯಾ ಗಾಂಧಿ ತ್ಯಾಗದಿಂದ ನಾವಲ್ಲಾ ಇಂದು ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದೇವೆ ಎಂದಿದ್ದಾರೆ.

ಇದೀಗ ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿಯನ್ನು ಕೆರಳಿಸಿದ್ದು. ರಾಜಕೀಯ ಜೊತೆಗೆ ಧರ್ಮಗಳನ್ನು ಬೆರೆಸುತ್ತಿರುವುದು ಮಾತ್ರವಲ್ಲ, ಗಾಂಧಿ ಕುಟಂಬ ಮೆಚ್ಚಿಸಲು ಕ್ರಿಶ್ಟಿಯನ್, ಮುಸ್ಲಿಮರ ಒಲೈಕೆಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದಿದೆ.

ತೆಲಂಗಾಣ ಸರ್ಕಾರ ಹೈದರಾಬಾದ್‌ನ ಲಾಲ್ ಬಹುದ್ದೂರ್ ಕ್ರೀಡಾಂಗಣದಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ ಆಯೋಜಿಸಿದೆ. ಈ ವೇಳೆ ಮಾತನಾಡಿದ ರೇವಂತ್ ರೆಡ್ಡಿ, ನಾವು ಕ್ರಿಸ್ಮಸ್ ಆಚರಣೆ ಮಾಡುವ ಹಿಂದೆ ಸೋನಿಯಾ ಗಾಂಧಿಯ ಅತೀ ದೊಡ್ಡ ತ್ಯಾಗವಿದೆ. ಡಿಸೆಂಬರ್ ತಿಂಗಳು ಭಾರಿ ವಿಶೇಷ. ಕಾರಣ ಇದೇ ತಿಂಗಳು ಸೋನಿಯಾ ಗಾಂಧಿ ಹುಟ್ಟು ಹಬ್ಬ. ಇದೇ ತಿಂಗಳು ಕ್ರಿಸ್ಮಸ್ ಹಬ್ಬದ ಆಚರಣೆಯೂ ಇದೆ. ಇದೇ ತಿಂಗಳು ತೆಲಂಗಾಣ ರಾಜ್ಯವಾಗಿ ಉದಯವಾಗಿತ್ತು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ ತನ್ನ ಒಲೈಕೆ ಸಂಪ್ರದಾಯ ಮುಂದುವರಿಸಿದೆ ಎಂದು ಬಿಜಪಿ ವಾಗ್ದಾಳಿ ನಡೆಸಿದೆ. ರೇವಂತ್ ರೆಡ್ಡಿ ಕ್ರಿಸ್ಮಸ್ ಹಬ್ಬವನ್ನೂ ಗಾಂಧಿ ಫ್ಯಾಮಿಲಯ ತ್ಯಾಗ ಎಂದು ಬಣ್ಣಿಸಿದ್ದಾರೆ. ಇದು ಕ್ರಿಶ್ಚಿಯನ್ನರ ಹಬ್ಬ, ಇದಕ್ಕೆ ರಾಜಕೀಯ ಬೆರೆಸುವುದು ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ.

ರೇವಂತ್ ರೆಡ್ಡಿ ಎಲ್ಲೆಲ್ಲಾ ಒಲೈಕೆ ಮಾಡಲು ಸಾಧ್ಯ ಅಲ್ಲಿ ಮತಗಳನ್ನು, ಸಮುದಾಯಗಳನ್ನು ಒಲೈಕೆ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಯ ಸರ್ಕಾರ ಅಧಿಕಾರದಲ್ಲಿದ್ದಾಗ ಜನಪಥ ನಿವಾಸದಲ್ಲಿ ಕ್ರಿಸ್ಮಸ್ ಆಚರಿಸಿದ್ದರು, ಆದರೆ ಯಾವುದೇ ಹಿಂದೂಗಳ ಹಬ್ಬ ಆಚರಿಸಲಿಲ್ಲ. ಪ್ರಮುಖ ಸ್ಥಾನದಲ್ಲಿರುವ ನಾಯಕರು ಈ ರೀತಿ ಒಂದು ಸಮುದಾಯದ ಹಬ್ಬ ಆಚರಿಸಿ, ಮತ್ತೊಂದು ಸಮುದಾಯವನ್ನು ಕಡೆಗಣಿಸುವುದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ. ಇದೀಗ ರೇವಂತ್ ರೆಡ್ಡಿ ಕೂಡ ಇದೇ ರೀತಿ ಸೋನಿಯಾ ಗಾಂಧಿ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

ಪ್ರತಿಯೊಬ್ಬರು ಅವರವರ ಮತಗಳನ್ನು, ಧರ್ಮಗಳನ್ನು, ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಒಬ್ಬ ಮುಖ್ಯಮಂತ್ರಿ ಕೆಲವೇ ಸಮುದಾಯದ ಹಬ್ಬ ಆಚರಿಸುವುದು ಸರಿಯಲ್ಲ. ಆಚರಿಸಿದರೆ ಹಿಂದು ಸಮುದಾಯದ ಹಬ್ಬಗಳನ್ನು ಆಚರಿಸಬೇಕು. ಹಿಂದು ಹಬ್ಬ ಕಡೆಗಣಿಸಿ ಇತರ ಸಮುದಾಯ ಹಬ್ಬ ಆಚರಣೆ ಸರಿಯಲ್ಲ. ಆಚರಿಸಿದರೆ ಎಲ್ಲಾ ಸಮುದಾಯದ ಆಚರಿಸಬೇಕು ಎಂದು ಬಿಜೆಪಿ ಹೇಳಿದೆ.

error: Content is protected !!