April 13, 2026
Monday, April 13, 2026
spot_img

Soup | ಉತ್ತಮ ಆರೋಗ್ಯಕ್ಕೆ ಈ ನುಗ್ಗೆ ಸೊಪ್ಪಿನ ಸೂಪ್ ಬೆಸ್ಟ್: ಟ್ರೈ ಮಾಡಿ

ರಾತ್ರಿ ಊಟಕ್ಕೆ ಹೆಲ್ದಿ ಸೂಪ್ ಬೇಕು ಅಂದ್ರೆ ನುಗ್ಗೆ ಸೊಪ್ಪಿನ ಸೂಪ್ ಬೆಸ್ಟ್. ಇದು ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ. ವಿಶೇಷವಾಗಿ ಶೀತ, ಕೆಮ್ಮು ಇದ್ದಾಗ ಅಥವಾ ಬೇಸಿಗೆಯಲ್ಲೂ ಲೈಟ್ ಡಿನ್ನರ್ ಬೇಕಾದಾಗ ಈ ಸೂಪ್ ತುಂಬಾ ಸೂಕ್ತ.

ಬೇಕಾಗುವ ಪದಾರ್ಥಗಳು:

ನುಗ್ಗೆ ಸೊಪ್ಪು – 1 ಕಪ್
ಈರುಳ್ಳಿ – 1 ಸಣ್ಣದು
ಬೆಳ್ಳುಳ್ಳಿ – 3 ಕಡಿ
ಜೀರಿಗೆ – ½ ಚಮಚ
ಕಾಳುಮೆಣಸಿನ ಪುಡಿ – ½ ಚಮಚ
ತುಪ್ಪ ಅಥವಾ ಎಣ್ಣೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನೀರು – 2 ಕಪ್
ನಿಂಬೆ ರಸ – ಕೆಲವು ಹನಿಗಳು

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.

ಇದಾದ ಬಳಿಕ ಚೆನ್ನಾಗಿ ತೊಳೆದ ನುಗ್ಗೆ ಸೊಪ್ಪನ್ನು ಸೇರಿಸಿ 1 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಈಗ ಎರಡು ಕಪ್ ನೀರು, ಉಪ್ಪು ಸೇರಿಸಿ 7ರಿಂದ 10 ನಿಮಿಷ ಕುದಿಯಲು ಬಿಡಿ.

ಕೊನೆಯಲ್ಲಿ ಕಾಳುಮೆಣಸಿನ ಪುಡಿ ಮತ್ತು ಕೆಲವು ಹನಿ ನಿಂಬೆ ರಸ ಸೇರಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

ರಾತ್ರಿ ಇದಕ್ಕೆ ಜೊತೆಗೆ ಒಂದು ಚಿಕ್ಕ ಬೌಲ್ ಸಲಾಡ್ ಅಥವಾ 1 ತುಂಡು ಮಲ್ಟಿಗ್ರೇನ್ ಬ್ರೆಡ್ ಜೊತೆ ತಿಂದರೆ ಪರ್ಫೆಕ್ಟ್ ಲೈಟ್ ಡಿನ್ನರ್ ಆಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !