ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರ ಅನುಕೂಲತೆ ಮತ್ತು ಡಿಜಿಟಲ್ ಪ್ರವೇಶ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಕ್ಯೂಆರ್ ಆಧಾರಿತ ವೆಬ್ ಅಪ್ಲಿಕೇಶನ್ ನಮ್ಮ ನಕ್ಷೆಯನ್ನು 14 ನಿಲ್ದಾಣಗಳಲ್ಲಿ ವಿಸ್ತರಿಸಿದೆ.
ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪ್ರಾರಂಭಿಸಲಾದ ನಮ್ಮ ನಕ್ಷೆ ಸೌಲಭ್ಯ ಎಸ್‌ಎಂವಿಟಿ ಬೆಂಗಳೂರು, ಬಂಗಾರಪೇಟೆ ಜಂಕ್ಷನ್, ಕೆಂಗೇರಿ, ಕೆ.ಆರ್. ಪುರಂ, ಯಲಹಂಕ ಜಂಕ್ಷನ್, ಕರ್ನೇಲಾರಂ, ಹೊಸೂರು, ಹಿಂದೂಪುರ, ಮಂಡ್ಯ, ರಾಮನಗರ, ತುಮಕೂರು ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಲ್ಲಿ ಲಭ್ಯವಿದೆ.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ: ಪ್ರಯಾಣಿಕರ ಅನುಕೂಲಕ್ಕೆ ‘ನಮ್ಮ ನಕ್ಷೆ’ QR ಅಪ್ 14 ನಿಲ್ದಾಣಗಳಲ್ಲಿ ವಿಸ್ತರಣೆ

