ಬೆಳಿಗ್ಗೆ ತಿನ್ನೋ ಆಹಾರ ಹೊಟ್ಟೆ ತುಂಬಿಸೋ ಹಾಗಿರಬೇಕು, ಜೊತೆಗೆ ಪ್ರೋಟೀನ್ ಕೂಡ ಸಿಗ್ಬೇಕು. ಅದಕ್ಕೆ ಸೋಯಾ ಮಸಾಲಾ ಫ್ರೈಡ್ ರೈಸ್ ಸೂಪರ್ ಬ್ರೇಕ್ ಫಾಸ್ಟ್. ತ್ವರಿತವಾಗಿ ತಯಾರಾಗೋ ಈ ರೈಸ್ ಬೆಳಗಿನ ಉಪಾಹಾರಕ್ಕೆ ರುಚಿ-ಪೌಷ್ಟಿಕತೆಯ ಕಾಂಬಿನೇಷನ್ ಕೊಡುತ್ತೆ.
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಕಪ್
ಸೋಯಾ ಚಂಕ್ಸ್ – 1 ಕಪ್
ಈರುಳ್ಳಿ – 1
ಕ್ಯಾರೆಟ್ – 1
ಕ್ಯಾಪ್ಸಿಕಮ್ – ½ ಕಪ್
ಬೀನ್ಸ್ – ½ ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 tsp
ಹಸಿಮೆಣಸು – 1
ಸೋಯಾ ಸಾಸ್ – 1 tbsp
ಮೆಣಸು ಪುಡಿ – ½ tsp
ಗರಂ ಮಸಾಲಾ – ½ tsp
ಎಣ್ಣೆ – 2 tbsp
ಉಪ್ಪು – ರುಚಿಗೆ
ತಯಾರಿಸುವ ವಿಧಾನ:
ಅನ್ನವನ್ನು ಬೇಯಿಸಿ ಆರಿಸಿಟ್ಟುಕೊಳ್ಳಿ. ಸೋಯಾ ಚಂಕ್ಸ್‌ನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ, ನಂತರ ಚೆನ್ನಾಗಿ ಒತ್ತಿ ನೀರು ತೆಗೆಯಿರಿ.
ಪ್ಯಾನಿನಲ್ಲಿ ಎಣ್ಣೆ ಹಾಕಿ ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹುರಿಯಿರಿ. ಈಗ ತರಕಾರಿಗಳನ್ನು ಸೇರಿಸಿ ಸ್ವಲ್ಪ ಫ್ರೈ ಮಾಡಿ. ನಂತರ ಸೋಯಾ ಚಂಕ್ಸ್ ಸೇರಿಸಿ 2–3 ನಿಮಿಷ ಬೇಯಿಸಿ. ಸೋಯಾ ಸಾಸ್, ಮೆಣಸು ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ. ಕೊನೆಗೆ ಅನ್ನ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಫ್ರೈ ಮಾಡಿ.

