ಹೊಸದಿಗಂತ ಡಿಜಿಟಲ್ ಡೆಸ್ಕ್:
ತೂಕ ಹೆಚ್ಚಿದ್ದ ಬ್ಯಾಗ್ ವಿಚಾರಕ್ಕೆ ಜುಲೈ 26 ರಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ, ಸ್ಪೈಸ್‌ಜೆಟ್‌ನ ಎಸ್‌ಜಿ–386 ವಿಮಾನದ ಸಿಬ್ಬಂದಿ ಮೇಲೆ ಹಿರಿಯ ಸೇನಾಧಿಕಾರಿಯೊಬ್ಬರು ಹಲ್ಲೆ ಮಾಡಿದ ಘಟನೆ ನಡೆದಿದೆ.
ದೆಹಲಿಗೆ ಹೋಗುವ ಅವರ ವಿಮಾನದಲ್ಲಿ (SG 386) ಹೆಚ್ಚುವರಿ ಲಗೇಜ್ ಹೆಚ್ಚುವರಿ ಹಣ ನೀಡುವಂತೆ ಸಿಬ್ಬಂದಿ ಕೇಳಿದಾಗ ಈ ಘಟನೆ ನಡೆದಿದೆ. ಸೇನಾ ಅಧಿಕಾರಿಯೂ ಸ್ಟ್ಯಾಂಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು ನಮ್ಮ ಸಿಬ್ಬಂದಿಗಳಿಗೆ ಬೆನ್ನುಮೂಳೆ ಮುರಿತ ಮತ್ತು ದವಡೆಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ವಿಮಾನಯಾನ ಸಂಸ್ಥೆ ಹೇಳುತ್ತದೆ. ಸ್ಪೈಸ್‌ಜೆಟ್ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಪ್ರಯಾಣಿಕರನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಕರ್ನಲ್ ಸಿಂಗ್ 16 ಕೆಜಿ ತೂಕದ ಎರಡು ಬ್ಯಾಗ್‌ಗಳನ್ನು ತೆಗೆದುಕೊಂಡು ಬಂದಿದ್ದರು. ಆದರೆ ವಿಮಾನಯಾನ ಸಂಸ್ಥೆಯ ನಿಯಮದ ಪ್ರಕಾರ 7 ಕೆಜಿ ಮಾತ್ರ ಅನುಮತಿಸಲಾಗುತ್ತದೆ. ಹೀಗಾಗಿ ಹೆಚ್ಚುವರಿ ಹಣ ಪಾವತಿಸುವಂತೆ ಸಿಬ್ಬಂದಿ ಕೇಳಿದ್ದಾರೆ. ಆದರೆ ಸಿಂಗ್ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಬ್ಬಂದಿ ಮತ್ತು ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಚೆಕ್ ಇನ್ ಮಾಹಿತಿಯ ಬೋರ್ಡ್‌ನಿಂದ ಒಬ್ಬರಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಸದ್ಯ ಸಿಬ್ಬಂದಿ ಬೆನ್ನುಮೂಳೆ ಮುರಿದಿದೆ. ಅಲ್ಲದೆ, ದವಡೆಗೂ ಗಂಭೀರ ಪೆಟ್ಟಾಗಿದೆ. ಈ ಎಲ್ಲ ಕಾರಣದಿಂದ ಎಚ್ಚೆತ್ತ ವಿಮಾನಯಾನ ಸಂಸ್ಥೆ ಸೇನಾಧಿಕಾರಿಯನ್ನು ವಿಮಾನ ಹಾರಾಟ ನಿಷೇಧ ಪಟ್ಟಿಗೆ ಸೇರಿಸಲಾಗಿದೆ.
https://x.com/Lolita_TNIE/status/1951942654414999763/video/2
ಸೇನಾಧಿಕಾರಿ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸಿ, ಸ್ಪೈಸ್‌ಜೆಟ್‌ನ ನಾಲ್ವರು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದರು. ಅಲ್ಲೇ ಇದ್ದ ರಕ್ಷಣಾಧಿಕಾರಿ ಸಿಬ್ಬಂದಿಯನ್ನು ಸೇನಾಧಿಕಾರಿಯಿಂದ ರಕ್ಷಿಸಿದರು. ಅವರನ್ನು ಆಚೆ ಕರೆದುಕೊಂಡು ಹೋಗಿ ಪರಿಸ್ಥಿತಿ ತಿಳಿಮಾಡಿದರು.
ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನ (ಸೇನಾಧಿಕಾರಿ) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ಸ್ಪೈಸ್‌ಜೆಟ್ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸ್ಪೈಸ್‌ಜೆಟ್ ಸಂಸ್ಥೆ ಪತ್ರ ಬರೆದಿದೆ. ಸೇನಾಧಿಕಾರಿ ಹಲ್ಲೆ ಮಾಡಿದ ಬಗ್ಗೆ ಬರೆದು, ಪ್ರಯಾಣಿಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಲಾಗಿದೆ. ನಮ್ಮ ಉದ್ಯೋಗಿಗಳ ವಿರುದ್ಧದ ಯಾವುದೇ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಲಾಗಿದೆ.