ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರ ಏಷ್ಯಾಕಪ್ ಗೆದ್ದ ಭಾರತಕ್ಕೆ ಟ್ರೋಫಿ ಸಿಗದ ವಿವಾದ ಕುರಿತು ಎಬಿ ಡಿವಿಲಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪ್ರತ್ಯೇಕವಾಗಿ ಇಡಬೇಕು ಎಂದು ಒತ್ತಿ ಹೇಳಿದ್ದಾರೆ. ಕ್ರೀಡೆಯನ್ನು ರಾಜಕೀಯದಿಂದ ಹೊರಗಿಟ್ಟು ಆಚರಿಸಬೇಕು ಎಂದೂ ಡಿವಿಲಿಯರ್ಸ್ ತಿಳಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್, ‘ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪ್ರತ್ಯೇಕವಾಗಿ ಇಡಬೇಕು. ಆದರೆ ರಾಜಕೀಯವು ಕ್ರೀಡೆಗಳನ್ನು ಮರೆಮಾಡುತ್ತಿರುವುದನ್ನು ನೋಡಿ ದುಃಖಿತನಾಗಿದ್ದೇನೆ. ಏಷ್ಯಾಕಪ್ ಟ್ರೋಫಿಯನ್ನು ಪ್ರದಾನ ಮಾಡುವ ವ್ಯಕ್ತಿಯ ಬಗ್ಗೆ ಟೀಂ ಇಂಡಿಯಾ ಅಸಮಾಧಾನ ಹೊಂದಿತ್ತು. ಕ್ರೀಡೆಯಲ್ಲಿ ಇದು ಸಂಭವಿಸಬಾರದು ಎಂದು ನಾನು ಭಾವಿಸುತ್ತೇನೆ. ಕ್ರಿಕೆಟ್ ಒಂದು ಆಚರಣೆ ಅದನ್ನು ಹಾಗೆಯೇ ಪರಿಗಣಿಸಬೇಕು. ಆಟಗಾರರನ್ನು ಅಂತಹ ಸಂದಿಗ್ಧತೆಯಲ್ಲಿ ನೋಡುವುದು ನನಗೆ ಇಷ್ಟವಾಗಲಿಲ್ಲ” ಎಂದು ತಿಳಿಸಿದ್ದಾರೆ.