Sunday, January 11, 2026

ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ಕಾಲ್ತುಳಿತ ಸಂಭವಿಸಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಹಲವು ಮಾರ್ಗಗಳಿಗೆ ತೆರಳಬೇಕಿದ್ದ ರೈಲುಗಳು ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತಿದ್ದವು. ರೈಲಿನಿಂದ ಜನ ಇಳಿಯುತ್ತಿದ್ದಾಗಲೇ ಹತ್ತಬೇಕಿದ್ದ ಜನರು ಒಂದೇ ಸಮನೇ ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಫ್ಲಾಟ್‌ ಫಾರ್ಮ್‌ 4 ಮತ್ತು 5ರಲ್ಲಿ ಕಾಲ್ತುಳಿತ ಸಂಭವಸಿದ್ದು, ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ.

ಸಂಜೆ ಸುಮಾರಿಗೆ, ಮೂರು ರೈಲುಗಳು 4, 6 ಮತ್ತು 7 ಪ್ಲಾಟ್‌ಫಾರ್ಮ್‌ಗಳಲ್ಲಿ ಏಕಕಾಲದಲ್ಲಿ ಬಂದು ನಿಂತಿದ್ದವು. ಹಾಗಾಗಿ ಮೂರು ರೈಲುಗಳಿಗೆ ಹತ್ತಲು ಜನ ಏಕಕಾಲಕ್ಕೆ ನುಗ್ಗಿದರು. ಇದರಿಂದ ಕಾಲ್ತುಳಿತ ಸಂಭವಿಸಿದೆ. ಗಾಯಾಳುಗಳನ್ನ ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!