ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಭೀಕರ ಪ್ರವಾಹದಲ್ಲಿ ಸಿಲುಕಿ ತತ್ತರಿಸಿದೆ. ಪಾಕಿಸ್ತಾನದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರಕ್ಷಣಾ ಕಾರ್ಯಾಚರಣೆಯೂ ಸರಿಯಾಗಿ ನಡೆಯುತ್ತಿಲ್ಲ, ಇತ್ತ ಪರಿಹಾರವವೂ ಇಲ್ಲ, ಇರುವ ಮನೆ ಹಾಗೂ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಇತ್ತ ಮೂರು ಹೊತ್ತು ಆಹಾರವೂ ಇಲ್ಲದೆ ಪರದಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ತಮ್ಮ ಜನರಿಗೆ ಪ್ರವಾಹದ ನೀರನ್ನು ಸಂಗ್ರಹಿಸಿ ಅದನ್ನು ಟಬ್‌ಗಳಲ್ಲಿ ತುಂಬಿಸಿಕೊಳ್ಳಿ, ಅಲ್ಲಾಹನ ಆಶೀರ್ವಾದ ಎಂದು ತಿಳಿಯಿರಿ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಸುದ್ದಿ ಚಾನೆಲ್ ದುನ್ಯಾ ನ್ಯೂಸ್‌ನೊಂದಿಗೆ ಮಾತನಾಡಿದ ಖವಾಜಾ ಆಸಿಫ್, ಜನರು ಈ ನೀರನ್ನು ಸುರಿಯುವ ಬದಲು ಪಾತ್ರೆಗಳು ಅಥವಾ ಟಬ್‌ಗಳಲ್ಲಿ ತುಂಬಿಸಿಕೊಳ್ಳಬೇಕು ಎಂದು ಹೇಳಿದರು.
ತಗ್ಗು ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಾಸಿಸುವ ಸುಮಾರು 25 ಲಕ್ಷ ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ಈ ಬಾರಿ ಮಾನ್ಸೂನ್ ಮಳೆಯು ಎಲ್ಲಾ ದಾಖಲೆಗಳನ್ನು ಮುರಿದಿದೆ. ಪಾಕಿಸ್ತಾನದ ಕೆಪಿಕೆ, ಪಿಒಕೆ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ತುಂಬಾ ಮಳೆಯಾಗುತ್ತಿದ್ದು ಈ ಪ್ರದೇಶಗಳು ಸಂಪೂರ್ಣವಾಗಿ ಮುಳುಗಿವೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸಂಪೂರ್ಣ ಪ್ರವಾಹಕ್ಕೆ ಸಿಲುಕಿದೆ. 2.4 ಮಿಲಿಯನ್ ಪಾಕಿಸ್ತಾನಿಯರು ಪ್ರವಾಹದಿಂದ ನಲುಗಿದ್ದಾರೆ. ಸಾವಿರಕ್ಕೂ ಹೆಚ್ಚು ಹಳ್ಳಿ ಜಲಾವೃತಗೊಂಡಿದೆ. ಈ ಜನರು ಇದೀಗ ಬದುಕು ಕಟ್ಟಿಕೊಳ್ಳಲು ಆಗದೆ, ಇತ್ತ ಒಂದು ಹೊತ್ತು ಆಹಾರವೂ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯೆ ನೀಡಿದ ಖವಾಜಾ ಆಸಿಫ್, ಪ್ರವಾಹ ಪರಿಸ್ಥಿತಿ ವಿರುದ್ದ ಪ್ರತಿಭಟನೆ ನಡೆಸುವುದಕ್ಕಿಂತ, ಪ್ರವಾಹ ನೀರನ್ನು ಮನೆಗೆ ತೆಗೆದುಕೊಂಡು ಹೋಗಿ ದೇಶ ಉದ್ಧಾರವಾಗುತ್ತದೆ ಎಂದಿದ್ದಾರೆ.
ವಾಹ ಬಂದಾಗ ಜನರು ನೀರನ್ನು ಟ್ಯೂಬ್, ಟ್ಯಾಂಕ್ ಸೇರಿದಂತೆ ಇತರ ದೊಡ್ಡ ಕಂಟೈನರ್‌ಗಳಲ್ಲಿ ಶೇಖರಿಸಿಡಬೇಕು. ಇದರಿಂದ ಬೇಸಿಗೆ ಕಾಲದಲ್ಲಿ ಪಾಕಿಸ್ತಾನಕ್ಕೆ ನೀರಿನ ಸಮಸ್ಯೆಯಾಗುವುದಿಲ್ಲ. ಕೃಷಿ, ವ್ಯವಸಾಯಕ್ಕೆ ಈ ನೀರನ್ನು ಉಪಯೋಗಿಸಬಹುದು ಎಂದು ಖವಾಜಾ ಆಸೀಫ್ ಭಾಷಣ ಮಾಡಿದ್ದಾರೆ.