ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿನಿತ್ಯ ಲಕ್ಷಾಂತರ ಜನರು ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ. 40 ಪದ್ಯಗಳ ಸ್ತೋತ್ರವಾದ ಹನುಮಂತ ಚಾಲೀಸಾ ಹನುಮನ ಜೀವನ, ಸಾಧನೆಗಳು, ಶಕ್ತಿ ಮತ್ತು ಬುದ್ಧಿವಂತಿಕೆಯ ಬಗ್ಗೆ ಎಲ್ಲವನ್ನೂ ಹೇಳುತ್ತದೆ. ತುಳಸಿದಾಸರು ಬರೆದಿರುವ ಈ ಮಂತ್ರ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಪಸರಿಸಿದ್ದು, ಇದೀಗ ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಟಿ-ಸೀರೀಸ್ ಯೂಟ್ಯೂಬ್‌ನಲ್ಲಿ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದ್ದ ಹನುಮಾನ್ ಚಾಲೀಸಾ ಬರೋಬ್ಬರೀ 5 ಬಿಲಿಯನ್ ಅಂದರೆ 500 ಕೋಟಿ ವೀಕ್ಷಣೆ ಪಡೆದಿದೆ. ಈ ಮೂಲಕ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ ಮೊದಲ ವಿಡಿಯೋ ಎಂಬ ಖ್ಯಾತಿ ಗಳಿಸಿದೆ.
ಟಿ-ಸೀರೀಸ್‌ನ ದಿವಂಗತ ಗುಲ್ಶನ್ ಕುಮಾರ್ ಅವರನ್ನು ಒಳಗೊಂಡ ‘ಶ್ರೀ ಹನುಮಾನ್ ಚಾಲೀಸಾ’ ವಿಡಿಯೋವನ್ನು 2011ರ ಮೇ 10 ರಂದು ಬಿಡುಗಡೆ ಮಾಡಲಾಯಿತು ಮತ್ತು 14 ವರ್ಷಗಳಲ್ಲಿ 5,006,713,956 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಮುನ್ನುಗ್ಗುತ್ತಿದೆ. ಹರಿಹರನ್ ಅವರ ಗಾಯನ ಮತ್ತು ಲಲಿತ್ ಸೇನ್ ಅವರ ಸಂಯೋಜನೆಯೊಂದಿಗೆ, ಇದು ಈಗ ಯೂಟ್ಯೂಬ್‌ನ ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳಲ್ಲಿ ಒಂದಾಗಿದೆ. ಈ ವೀಡಿಯೊ ದಾಖಲೆ ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. ಇದು 2023 ರಲ್ಲಿ 3 ಬಿಲಿಯನ್ ವೀಕ್ಷಣೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿತ್ತು.
ಭಕ್ತಿಯ ಶಕ್ತಿಯೇ ಅಂಥದ್ದು! ಯೂಟ್ಯೂಬ್‌ನಲ್ಲಿ ಬರೋಬ್ಬರೀ 500 ಕೋಟಿ ವೀಕ್ಷಣೆ ಪಡೆದ ಹನುಮಾನ್ ಚಾಲಿಸಾ

