January20, 2026
Tuesday, January 20, 2026
spot_img

ಇದ್ದಕ್ಕಿದ್ದಂತೆಯೇ ಇಂದು ಇವಿ ಬಿಎಂಟಿಸಿ ಬಸ್ ಚಾಲಕರಿಂದ ದಿಢೀರ್‌ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಟೆಂಡೆನ್ಸ್ ಬೋನಸ್ ಹಾಗೂ ವೇತನ‌ಭತ್ಯೆಗೆ ಆಗ್ರಹಿಸಿ ಮೈಸೂರು ರಸ್ತೆಯ ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ ಡಿಪೋದಲ್ಲಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ದಿಢೀರ್‌ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಸ್ಸುಗಳನ್ನು ತೆಗೆಯದೇ ಡಿಪೋ ನಂಬರ್ 16ರ 100 ಕ್ಕೂ ಇವಿ ಬಸ್ಸುಗಳ ಚಾಲಕರ ಪ್ರತಿಭಟನೆ ನಡೆಸುತ್ತಿರುವ ಕಾರಣ ಸಂಚಾರದಲ್ಲಿ ವ್ಯತ್ಯಯವಾಗಿದೆ. 

ಕಳೆದ ಎರಡು ವರ್ಷಗಳಿಂದ ಅಟೆಂಡೆನ್ಸ್ ಬೋನಸ್, ವೇತನ ಭತ್ಯೆ ನೀಡುತ್ತಿಲ್ಲ. ಅಪಘಾತವಾದಾಗ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಚಾಲಕರಿಗೆ ಭದ್ರತೆಯಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಇವಿ ಬಸ್ ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದಾರೆ.

ಎಲೆಕ್ಟ್ರಿಕ್‌ ಬಸ್ಸು ಚಾಲಕರು ನೇರವಾಗಿ ಬಿಎಂಟಿಸಿ ವ್ಯಾಪ್ತಿಗೆ ಬರುವುದಿಲ್ಲ. ಇವರು ಗುತ್ತಿಗೆ ನೌಕರರಾಗಿದ್ದು ಖಾಸಗಿ ಸಂಸ್ಥೆ ನೇಮಕ ಮಾಡುತ್ತದೆ. ಈ ಸಂಸ್ಥೆ ಚಾಲಕರನ್ನು ನೇಮಕ ಮಾಡುವಾಗ ಯಾವ ರೀತಿ ಒಪ್ಪಂದ ಮಾಡಿಕೊಂಡಿರುತ್ತದೋ ಒಪ್ಪಂದಂತೆ ಸಂಬಳ, ಭತ್ಯೆಯನ್ನು ನೀಡಬೇಕಾಗುತ್ತದೆ.

Must Read