ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ‘ಮಾರ್ಕ್’ ಚಿತ್ರವನ್ನು ಅಭಿಮಾನಿಗಳೊಂದಿಗೆ ವೀಕ್ಷಿಸಿ ಸಂಭ್ರಮಿಸಿದರು. ಸಿನಿಮಾ ವೀಕ್ಷಣೆಯ ಬಳಿಕ ಎಂದಿನಂತೆ ಮಾಧ್ಯಮಗಳ ಎದುರು ಬಂದ ಸುದೀಪ್ ಅವರಿಗೆ, ನಟಿ ವಿಜಯಲಕ್ಷ್ಮಿ ಅವರಿಗೆ ಸಂಬಂಧಿಸಿದ ವಿವಾದದ ಬಗ್ಗೆ ಪ್ರಶ್ನೆ ಎದುರಾಯಿತು.
ಯಾವುದೇ ಅಳುಕಿಲ್ಲದೆ ನೇರವಾಗಿಯೇ ಉತ್ತರಿಸಿದ ಸುದೀಪ್, “ನಮ್ಮ ವಿಷಯದ ಬಗ್ಗೆ ಮಾತನಾಡೋಣ, ಪಕ್ಕದ ಮನೆಯವರ ವಿಷಯ ನಮಗೇಕೆ?” ಎನ್ನುವ ಮೂಲಕ ಆ ವಿಷಯಕ್ಕೂ ತಮಗೂ ಸಂಬಂಧವಿಲ್ಲ ಎಂಬ ನಿಲುವನ್ನು ಸ್ಪಷ್ಟಪಡಿಸಿದರು. ಸುದೀಪ್ ಅವರ ಈ ಸಮಯಪ್ರಜ್ಞೆ ಮತ್ತು ಖಡಕ್ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.
ಸುದೀಪ್ ಅವರ ಈ ನಡೆಯನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. “ಯಾರೋ ಮಾಡುವ ಅನಗತ್ಯ ವಿವಾದಗಳಿಗೆ ಸುದೀಪ್ ಅವರು ತಲೆಕೆಡಿಸಿಕೊಳ್ಳಬಾರದು, ದಯವಿಟ್ಟು ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಬೇಡಿ” ಎಂದು ಅವರ ಅಭಿಮಾನಿಗಳು ಕಿಚ್ಚನಿಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಸುದೀಪ್ ಅವರು ಗಾಳಿ ಸುದ್ದಿಗಳು ಮತ್ತು ವಿವಾದಗಳಿಗೆ ತಾವು ಬೆಲೆ ಕೊಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

