March 21, 2026
Saturday, March 21, 2026
spot_img

Summer Drinks | ಬಿಸಿಲಿನ ಬೇಗೆ ತಣಿಸೋಕೆ ಇಲ್ಲಿದೆ ಕೂಲ್ ಡ್ರಿಂಕ್ಸ್ ಆಮ್ ಪನ್ನಾ

ಬೇಸಿಗೆ ಬಿಸಿಲಿನಲ್ಲಿ ದೇಹಕ್ಕೆ ತಂಪು, ತಾಜಾತನ ನೀಡುವ ಪಾನೀಯಗಳಲ್ಲಿ ಆಮ್ ಪನ್ನಾ ಗೆ ಫಸ್ಟ್ ಪ್ಲೇಸ್. ಮಾವಿನಕಾಯಿಯಿಂದ ತಯಾರಿಸುವ ಈ ಪಾನೀಯವು ದೇಹದ ತಾಪಮಾನ ಕಡಿಮೆ ಮಾಡುವುದರ ಜೊತೆಗೆ ಶಕ್ತಿ ನೀಡುತ್ತದೆ.

ಬೇಕಾಗುವ ಪದಾರ್ಥಗಳು:

ಮಾವಿನಕಾಯಿ – 2
ಸಕ್ಕರೆ ಅಥವಾ ಬೆಲ್ಲ – 1/2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕಪ್ಪು ಉಪ್ಪು – 1/2 ಟೀ ಸ್ಪೂನ್
ಜೀರಿಗೆ ಪುಡಿ – 1 ಟೀ ಸ್ಪೂನ್
ಪುದೀನಾ ಎಲೆ – ಸ್ವಲ್ಪ
ನೀರು – ಅಗತ್ಯಕ್ಕೆ

ಮಾಡುವ ವಿಧಾನ:

ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಪ್ರೆಶರ್ ಕುಕ್ಕರ್‌ನಲ್ಲಿ 2-3 ಸಿಟಿ ಬರುವವರೆಗೆ ಬೇಯಿಸಿ.
ತಣ್ಣಗಾದ ನಂತರ ಅದರ ಸಿಪ್ಪೆ ತೆಗೆದು ರುಬ್ಬಿಕೊಳ್ಳಿ. ಈಗ ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಉಪ್ಪು, ಕಪ್ಪು ಉಪ್ಪು, ಜೀರಿಗೆ ಪುಡಿ ಸೇರಿಸಿ ಮಿಕ್ಸಿ ಮಾಡಿ.

ನಂತರ ಈ ಮಿಶ್ರಣಕ್ಕೆ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಪುದೀನಾ ಎಲೆಗಳನ್ನು ಸೇರಿಸಿ ತಂಪಾಗಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !