March 12, 2026
Thursday, March 12, 2026
spot_img

Summer Drinks | ಬಾಳೆಹಣ್ಣಿನೊಂದಿಗೆ ಪೀನಟ್ ಬಟರ್ ಮಿಕ್ಸ್ ಮಾಡಿದ್ರೆ ರೆಡಿ ಆಗುತ್ತೆ ರುಚಿಯಾದ ಮಿಲ್ಕ್‌ಶೇಕ್

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಜೊತೆಗೆ ಶಕ್ತಿಯನ್ನೂ ಹೆಚ್ಚಿಸುವ ಪಾನೀಯಗಳಲ್ಲಿ ಬನಾನಾ ಪೀನಟ್ ಬಟರ್ ಮಿಲ್ಕ್‌ಶೇಕ್ ಒಂದು. ಬಾಳೆಹಣ್ಣು ಮತ್ತು ಪೀನಟ್ ಬಟರ್ ಎರಡೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ಜಿಮ್ ಮಾಡುವವರು ಅಥವಾ ತ್ವರಿತವಾಗಿ ಎನರ್ಜಿ ಬೇಕಾದವರಿಗೆ ಇದು ಬೆಸ್ಟ್.

ಬೇಕಾಗುವ ಸಾಮಗ್ರಿಗಳು

ಬಾಳೆಹಣ್ಣು – 2
ಪೀನಟ್ ಬಟರ್ – 2 ಚಮಚ
ಹಾಲು – 1 ಗ್ಲಾಸ್
ಜೇನುತುಪ್ಪ ಅಥವಾ ಸಕ್ಕರೆ – 1 ಚಮಚ
ಐಸ್ ಕ್ಯೂಬ್ಸ್ – ಸ್ವಲ್ಪ

ಮಾಡುವ ವಿಧಾನ

ಮೊದಲು ಬಾಳೆಹಣ್ಣಿನ ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿ. ನಂತರ ಮಿಕ್ಸಿ ಜಾರಿನಲ್ಲಿ ಬಾಳೆಹಣ್ಣು, ಪೀನಟ್ ಬಟರ್, ಹಾಲು ಮತ್ತು ಜೇನುತುಪ್ಪ ಅಥವಾ ಸಕ್ಕರೆ ಸೇರಿಸಿ. ಬೇಕಿದ್ದರೆ ಐಸ್ ಕ್ಯೂಬ್ಸ್ ಕೂಡ ಹಾಕಬಹುದು.

ಇದನ್ನು ಚೆನ್ನಾಗಿ ಮಿಕ್ಸಿ ಮಾಡಿದರೆ ಮೃದುವಾದ ಮತ್ತು ಕ್ರೀಮಿ ಮಿಲ್ಕ್‌ಶೇಕ್ ಸಿದ್ಧವಾಗುತ್ತದೆ. ನಂತರ ಗ್ಲಾಸ್‌ಗೆ ಸುರಿದು ಮೇಲಿಂದ ಸ್ವಲ್ಪ ಪೀನಟ್ ಬಟರ್ ಅಥವಾ ಬಾಳೆಹಣ್ಣು ತುಂಡುಗಳನ್ನು ಹಾಕಿ ಅಲಂಕರಿಸಿದರೆ ಆಯ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !