March 31, 2026
Tuesday, March 31, 2026
spot_img

summer drinks | ಮೊಹಬ್ಬತ್ ಕಾ ಶರ್ಬತ್ : ಒಂದ್ಸಲ ಕುಡಿದ್ರೆ ಬೇಸಿಗೆ ಮುಗಿಯೋ ತನಕ ಇದನ್ನೇ ಕೇಳ್ತಿರ

ಬೇಸಿಗೆಯ ಬಿಸಿಯಲ್ಲಿ ದೇಹಕ್ಕೆ ತಂಪು ನೀಡುವ ಸರಳ ಹಾಗೂ ರುಚಿಕರ ಪಾನೀಯಗಳಲ್ಲಿ ಮೊಹಬ್ಬತ್ ಕಾ ಶರ್ಬತ್ ಬಹಳ ಪ್ರಸಿದ್ಧವಾಗಿದೆ. ದೆಹಲಿಯ ಹಳೆಯ ಭಾಗಗಳಲ್ಲಿ ಜನಪ್ರಿಯವಾಗಿರುವ ಈ ಪಾನೀಯ ಹಾಲು, ರೋಸ್ ಸಿರಪ್ ಮತ್ತು ಕಲ್ಲಂಗಡಿ ಹಣ್ಣಿನಿಂದ ತಯಾರಾಗುತ್ತೆ. ಕುಡಿಯಲು ತಾಜಾ ರುಚಿ ನೀಡುವ ಈ ಶರ್ಬತ್ ಮನೆಯಲ್ಲೇ ಬಹಳ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ತಣ್ಣನೆಯ ಹಾಲು – 2 ಕಪ್
ರೋಸ್ ಸಿರಪ್ – 3 ರಿಂದ 4 ಟೇಬಲ್ ಸ್ಪೂನ್
ಕಲ್ಲಂಗಡಿ ಹಣ್ಣು (ಸಣ್ಣ ತುಂಡುಗಳು) – 1 ಕಪ್
ಸಕ್ಕರೆ – ಅಗತ್ಯವಿದ್ದರೆ
ಐಸ್ ಕ್ಯೂಬ್‌ಗಳು – ಸ್ವಲ್ಪ
ಬಾದಾಮಿ ಅಥವಾ ಪಿಸ್ತಾ ತುಂಡುಗಳು – ಅಲಂಕಾರಕ್ಕೆ

ತಯಾರಿಸುವ ವಿಧಾನ

ಮೊದಲು ಒಂದು ಬೌಲ್‌ನಲ್ಲಿ ತಣ್ಣನೆಯ ಹಾಲು ಹಾಕಿ. ಅದಕ್ಕೆ ರೋಸ್ ಸಿರಪ್ ಸೇರಿಸಿ ಚೆನ್ನಾಗಿ ಕಲಸಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿದ ಕಲ್ಲಂಗಡಿ ಹಣ್ಣು ಸೇರಿಸಿ ಮೃದುವಾಗಿ ಮಿಶ್ರಣ ಮಾಡಿ. ಸಿಹಿ ಕಡಿಮೆ ಅನಿಸಿದರೆ ಸ್ವಲ್ಪ ಸಕ್ಕರೆ ಸೇರಿಸಬಹುದು.

ನಂತರ ಗ್ಲಾಸ್‌ಗೆ ಐಸ್ ಕ್ಯೂಬ್‌ಗಳನ್ನು ಹಾಕಿ ತಯಾರಿಸಿದ ಶರ್ಬತ್ ಸುರಿಯಿರಿ. ಮೇಲಿಂದ ಬಾದಾಮಿ ಅಥವಾ ಪಿಸ್ತಾ ತುಂಡುಗಳನ್ನು ಹಾಕಿ ಅಲಂಕರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

ತಂಪಾಗಿರುವಾಗಲೇ ಈ ರುಚಿಕರ ಮೊಹಬ್ಬತ್ ಕಾ ಶರ್ಬತ್ ಸರ್ವ್ ಮಾಡಿದರೆ ಬೇಸಿಗೆಯಲ್ಲಿ ದೇಹಕ್ಕೆ ತಾಜಾತನ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !