February 10, 2026
Tuesday, February 10, 2026
spot_img

ರೈಲ್ವೆ ಪ್ರಯಾಣಿಕರಿಗಾಗಿ ಸೂಪರ್‌ ಆ್ಯಪ್ ಬಿಡುಗಡೆ: ಇನ್ಮುಂದೆ ಒಂದೇ ಕಡೆ ಸಿಗಲಿದೆ ಎಲ್ಲ ಮಾಹಿತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆಯು ತನ್ನ ಅಧಿಕೃತ ‘ರೈಲ್ಒನ್’ (RailOne) ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

ಈ ಮೂಲಕ ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸಿದೆ.

ಈ ಅಪ್ಲಿಕೇಶನ್ ನಲಿ ಎಲ್ಲಾ ಮಾಹಿತಿಗಳು ಇದ್ದು,ಹೀಗಾಗಿ ಪ್ರಯಾಣಿಕ ಸೌಲಭ್ಯಗಳನ್ನು ಒಂದೇ ಅಪ್ಲಿಕೇಶನ್’ನಲ್ಲಿ ಒಳಗೊಂಡಿದೆ.

ರೈಲ್ಒನ್ ಆ್ಯಪ್ ನಲ್ಲಿ ಕಾಯ್ದಿರಿಸಿದ ಟಿಕೆಟ್’ಗಳು, ಕಾಯ್ದಿರಿಸದ ಟಿಕೆಟ್’ಗಳು, ಪ್ಲಾಟ್ಫಾರ್ಮ್ ಟಿಕೆಟ್’ಗಳು ಮತ್ತು ಸೀಸನ್ ಟಿಕೆಟ್’ಗಳನ್ನು ಬುಕ್ ಮಾಡಬಹುದು.ಜೊತೆಗೆ ರೈಲುಗಳ ಹುಡುಕಾಟ, ಪಿಎನ್ಆರ್ (PNR) ಸ್ಥಿತಿ, ಕೋಚ್ ವಿವರ ಮತ್ತು ರೈಲು ಎಲ್ಲಿದೆ ಎಂಬ ನೈಜ ಸಮಯದ ಮಾಹಿತಿಗಳನ್ನೂ ಪಡೆಯಬಹುವುದು.

ರೈಲ್ಒನ್ ಆ್ಯಪ್ ಮೂಲಕ ಕಾಯ್ದಿರಿಸದ ಟಿಕೆಟ್ಗಳನ್ನು ಬುಕ್ ಮಾಡುವ ಪ್ರಯಾಣಿಕರು ಎಲ್ಲಾ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಶೇಕಡಾ 3 ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ರೈಲ್ಒನ್ ವೇದಿಕೆಯಲ್ಲಿ ಯುಪಿಐ, ಡೆಬಿಟ್ ಕಾರ್ಡ್’ಗಳು, ಕ್ರೆಡಿಟ್ ಕಾರ್ಡ್’ಗಳು, ನೆಟ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಪಾವತಿ ಆಯ್ಕೆಗಳನ್ನು ಬಳಸಿ ಮಾಡುವ ಕಾಯ್ದಿರಿಸದ ಟಿಕೆಟ್ ಬುಕಿಂಗ್ ಗಳಿಗೆ ಈ ರಿಯಾಯಿತಿ ಅನ್ವಯಿಸುತ್ತದೆ.

ಈ ಕೊಡುಗೆಯು 14 ಜನವರಿ 2026 ರಿಂದ ಜಾರಿಗೆ ಬಂದಿದ್ದು, ಪ್ರಯಾಣಿಕರು ಡಿಜಿಟಲ್ ಟಿಕೆಟಿಂಗ್ ಅಳವಡಿಸಿಕೊಳ್ಳಲು ಮತ್ತು ಸುಗಮ ಪ್ರಯಾಣದ ಅನುಭವವನ್ನು ಆನಂದಿಸಲು ಉತ್ತೇಜಿಸುತ್ತದೆ.

ರೈಲ್ಒನ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆ್ಯಪ್ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ. ಪ್ರಯಾಣಿಕರು ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಲು ಮತ್ತು ಅದರ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳು ಹಾಗೂ ವಿಶೇಷ ಪ್ರಯೋಜನಗಳ ಲಾಭವನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ.

‘ಯುಟಿಎಸ್ ಆನ್ ಮೊಬೈಲ್’ ಆ್ಯಪ್ ಸೇವೆ ರದ್ದು
ಭಾರತೀಯ ರೈಲ್ವೆಯು ತನ್ನ ಹಳೆಯ ‘ಯುಟಿಎಸ್ ಆನ್ ಮೊಬೈಲ್’ (UTS on Mobile) ಆ್ಯಪ್ ಸೇವೆಗಳನ್ನು ಮಾರ್ಚ್ 1, 2026 ರಿಂದ ಹಂತ ಹಂತವಾಗಿ ಸ್ಥಗಿತಗೊಳಿಸಲಿದೆ.
ಯುಟಿಎಸ್ ಆಪ್ನಲ್ಲಿ ಸೀಸನ್ ಟಿಕೆಟ್ ಬುಕಿಂಗ್, ನವೀಕರಣ ಮತ್ತು ಹೊಸ ಬಳಕೆದಾರರ ನೋಂದಣಿಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಆದರೂ ಅಪ್ಲಿಕೇಶನ್ ಸದ್ಯಕ್ಕೆ ಆಪ್ ಸ್ಟೋರ್ ನಲ್ಲಿ ಲಭ್ಯವಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !