ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ (SIR) ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ಅರ್ಜಿದಾರರಲ್ಲಿ ಒಬ್ಬರಾದ ಮತ್ತು ಸರ್ಕಾರೇತರ ಸಂಸ್ಥೆಯ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರ್ ನಾರಾಯಣನ್ ಮತದಾರರ ಪಟ್ಟಿ ಪರಿಷ್ಕರಣೆಗೆ ಮಧ್ಯಂತರ ತಡೆ ನೀಡುವಂತೆ ಕೋರಿದರು.
ಈ ವೇಳೆ ಪೀಠ, ಈ ಹಿಂದಿನ ಆದೇಶವನ್ನುಪ್ರಸ್ತಾಪಿಸಿ, ಈ ಹಂತದಲ್ಲಿ ಪಟ್ಟಿ ಪರಿಷ್ಕರಣೆಗೆ ತಡೆ ನೀಡಲು ಸಾಧ್ಯವಿಲ್ಲ. ಈ ಕುರಿತು ಅರ್ಜಿಗಳನ್ನು ಒಟ್ಟು ಮಾಡಿ ಒಮ್ಮೆಲೇ ನಿರ್ಧರಿಸುವುದಾಗಿ ಅದು ಹೇಳಿತು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಆಧಾರ್ ಮತ್ತು ಮತದಾರರ ಕಾರ್ಡ್‌ಗಳನ್ನು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗಿತ್ತು, ಇದನ್ನು ಆಯೋಗವೂ ಒಪ್ಪಿಕೊಂಡು ಅಫಿಡವಿಟ್ ಸಲ್ಲಿಸಿದೆ.ಪಡಿತರ ಕಾರ್ಡ್‌ಗಳನ್ನು ಸುಲಭವಾಗಿ ನಕಲಿ ಮಾಡಬಹುದು ಎಂದು ಹೇಳಿರುವ ಪೀಠವು, ಆಧಾರ್ ಮತ್ತು ಮತದಾರರ ಕಾರ್ಡ್‌ಗಳಿಗೆ ತನ್ನದೇ ಆದ ಪಾವಿತ್ರ್ಯತೆ ಮತ್ತು ದೃಢೀಕರಣವಿದೆ. ಹೀಗಾಗಿ, ಅವುಗಳನ್ನು ಮತದಾರರ ಪರಿಷ್ಕರಣೆಗೆ ಪರಿಗಣಿಸಲು ಸೂಚಿಸಿತ್ತು.