January18, 2026
Sunday, January 18, 2026
spot_img

ಮಾರ್ಚ್ ನಲ್ಲಿ ಟಿ20 ನಾಯಕತ್ವಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ! ನೆಕ್ಸ್ಟ್ ಕ್ಯಾಪ್ಟನ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್‌ನಲ್ಲಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಇತ್ತೀಚಿನ ನಾಯಕತ್ವದ ನಿರ್ಧಾರವು ಹಲವು ಅಭಿಮಾನಿಗಳನ್ನು ಆಶ್ಚರ್ಯಚಕಿತರಾಗಿಸಿದೆ. ರೋಹಿತ್ ಶರ್ಮಾ ವಿದಾಯ ಹೇಳಿದ ನಂತರ, ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಶುಭ್ಮನ್ ಗಿಲ್‌ಗೆ ಹಸ್ತಾಂತರಿಸಲಾಗಿದೆ. ಟಿ20 ತಂಡದ ನಾಯಕತ್ವದಲ್ಲಿ ಸೂರ್ಯಕುಮಾರ್ ಯಾದವ್ ಮುಂದುವರೆದಿದ್ದಾರೆ, ಆದರೂ 2026ರ ಟಿ20 ವಿಶ್ವಕಪ್ ಬಳಿಕ ಈ ಸ್ಥಾನವೂ ಗಿಲ್‌ಗೆ ಹೋಗುವ ನಿರೀಕ್ಷೆಯಿದೆ.

ಶುಭ್ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ನಾಯಕತ್ವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದರಿಂದ, ಈ ನಿರ್ಧಾರ ಬಿಸಿಸಿಐ ಸಹಜವಾಗಿ ಕೈಗೊಂಡಿದೆ. ಹೀಗಾಗಿ, ಗಿಲ್ ಈಗ ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಕಮಾಂಡ್ ಹಿಡಿಯಲಿದ್ದಾರೆ. ಟಿ20 ತಂಡದ ನಾಯಕತ್ವ ತಾತ್ಕಾಲಿಕವಾಗಿ ಸೂರ್ಯಕುಮಾರ್ ಯಾದವ್ ಬಳಿ ಉಳಿಯುತ್ತದೆ, ಅವರು 2026ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯುವ ಟಿ20 ವಿಶ್ವಕಪ್‌ನವರೆಗೆ ಸ್ಥಾನವನ್ನು ಕಾಯಲಿದ್ದಾರೆ.

ಬಿಸಿಸಿಐ ಮೂಲಗಳ ಪ್ರಕಾರ, ಮೂರು ಸ್ವರೂಪಗಳಲ್ಲಿಯೂ ಒಂದೇ ನಾಯಕನನ್ನು ನಿರ್ಧರಿಸುವ ಯೋಜನೆಯ ಭಾಗವಾಗಿ, ಗಿಲ್ ಟಿ20 ತಂಡಕ್ಕೂ ನಾಯಕತ್ವ ಪಡೆಯಲಿದ್ದಾರೆ. ಈ ಕ್ರಮದಿಂದ ಭಾರತ ಕ್ರಿಕೆಟ್ ತಂಡದಲ್ಲಿ ಯುವ ನಾಯಕತ್ವಕ್ಕೆ ಹೆಚ್ಚು ಅವಕಾಶ ಸಿಕ್ಕಿದ್ದು, ತಂಡದ ದೀರ್ಘಕಾಲೀನ ಯೋಜನೆಗಳಿಗೆ ಸಹಾಯಕವಾಗಿದೆ.

Must Read

error: Content is protected !!